Wednesday, 26th February 2020

ನಿಮ್ಮ ಮಕ್ಕಳು ಆನ್‍ಲೈನ್ ಗೇಮ್‍ಗೆ ಬಲಿಯಾಗುತ್ತಿದ್ದಾರೆಯೇ?

* ಶಶಿಧರ ಹಾಲಾಡಿ

gazeteer@vishwavani.news

ಇಂಟ್ರೊೊ : ಇಂದು ನಮ್ಮ ದೇಶದಲ್ಲಿ ಕಡಿಮೆ ಬೆಲೆಯ ಅಂತರ್ಜಾಲ ಡಾಟಾ ಮತ್ತು ಸ್ಮಾಾರ್ಟ್‌ಫೋನ್‌ಗಳ ವ್ಯಾಾಪಕ ಬಳಕೆಯಿಂದಾಗಿ, ತಂತ್ರಜ್ಞಾಾನದ ಸದುಪಯೋಗಗಳ ಜತೆಯಲ್ಲೇ, ಕೆಲ ಮಟ್ಟದ ಹಾನಿಯೂ ಉಂಟಾಗುತ್ತಿಿದೆ. ಅವುಗಳಲ್ಲಿ ಒಂದು ವಿಡಿಯೋ ಗೇಮ್ ಮತ್ತು ಆನ್‌ಲೈನ್ ಗೇಮ್‌ಗಳ ವ್ಯಸನ.

ಮಕ್ಕಳು ದೊಡ್ಡವರೆನ್ನದೇ, ಎಲ್ಲರೂ ಇಂದು ಸದಾಕಾಲ ಜತೆಯಲ್ಲಿಟ್ಟುಕೊಂಡು, ಬಳಸುವ ಆಧುನಿಕ ಸಾಧವೆಂದರೆ ಸ್ಮಾಾರ್ಟ್‌ಫೋನ್. ತಂತ್ರಜ್ಞಾಾನದ ದಾಪುಗಾಲು, ಕೃತಕ ಬುದ್ಧಿಿಮತ್ತೆೆ (ಎಐ) ಬಳಕೆಯಿಂದಾಗಿ, ಇಂದಿನ ಸ್ಮಾಾರ್ಟ್‌ಫೋನ್‌ಗಳು ಸರಿಸುಮಾರು ಒಂದು ಕಂಪ್ಯೂೂಟರ್ ನಿರ್ವಹಿಸುವ ಕಾರ್ಯವನ್ನು ಸುಲಲಿತವಾಗಿ ಮಾಡುತ್ತವೆ. ಅವುಗಳ ಗಾತ್ರವನ್ನು ಗಮನಿಸಿದರೆ, ಹಲವು ಬಾರಿ ಲ್ಯಾಾಪ್‌ಟಾಪ್‌ನ್ನು ಬಳಸುವುದಕ್ಕಿಿಂತ, ಸ್ಮಾಾರ್ಟ್‌ಫೋನ್ ಬಳಸುವುದೇ ಹೆಚ್ಚು ಸುಲಭ, ಅನುಕೂಲ ಎನಿಸಿದೆ.

ಸ್ಮಾಾರ್ಟ್‌ಪೋನ್‌ಗಳ ಸಾರ್ವತ್ರಿಿಕ ಬಳಕೆಯಿಂದ ಆಗಿರುವ ಹಲವು ಲಾಭಗಳ ಜತೆ, ಸದ್ದಿಲ್ಲದೇ ಸಾಕಷ್ಟು ಹಾನಿಕಾರಕ ಅಂಶಗಳು ಎಲ್ಲರ ಮನೆ, ಮನ, ಜೀವನ ಪ್ರವೇಶಿಸಿವೆ. ಅವುಗಳಲ್ಲಿ ಬಹುಮುಖ್ಯ ಎನಿಸುವ ಅನಿಷ್ಟಗಳಲ್ಲಿ ಒಂದೆದಂದರೆ, ವಿಡಿಯೋ ಗೇಮ್ ಮತ್ತು ಆನ್‌ಲೈನ್ ಗೇಮ್‌ಗಳ ಪಿಡುಗು. ಮಕ್ಕಳು-ದೊಡ್ಡವರೆನ್ನದೇ, ಮನರಂಜನೆಗೆ ಎಂದು ಆರಂಭಿಸುವ ವಿಡಿಯೋ ಗೇಮ್‌ಗಳು ಕ್ರಮೇಣ ತಮ್ಮ ಕರಾಳ ಬಾಹುಗಳನ್ನು ಬಳಸುವವರ ಮನದಾಳಕ್ಕೆೆ ಚಾಚುಗುದಂತೂ ನಿಜ. ಹಿಂದಿನ ಕಾಲದ ಆಟಗಳು ಮಕ್ಕಳ ದೇಹದಾರ್ಢ್ಯವನ್ನು ಉತ್ತಮಪಡಿಸಿ, ಪರಸ್ಪರ ಸಮನ್ವಯದ ಅಂಶಗಳನ್ನು ಹೆಚ್ಚಿಿಸಿದರೆ, ವಿಡಿಯೋ ಗೇಮ್‌ಗಳು ಆಟಗಾರರ ಮನಸ್ಥಿಿತಿಯನ್ನು ಕುಂದಿಸುವುದನ್ನು ಮನೋತಜ್ಞರು ಗುರುತಿಸಿದ್ದಾಾರೆ. ಅಡಿಕ್ಷನ್ ಗುಣವನ್ನು ಅಳವಡಿಸಬೇಕು ಎಂಬ ಉದ್ದೇಶದಿಂದ, ವಿವಿಧ ಸಂಸ್ಥೆೆಗಳು ತಯಾರಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿಿರುವ ವಿಡಿಯೋ ಗೇಮ್‌ಗಳು, ಹಲವು ಮಕ್ಕಳು ಮತ್ತು ಯುವಕರ ಭವಿಷ್ಯವನ್ನೇ ಹಾಳುಮಾಡುತ್ತಿಿರುವ ಕಾಲ ಇದು.

ಧೂಮಪಾನ, ಮದ್ಯಪಾನ, ಮಾದಕವಸ್ತುಗಳು ಮಾನವರಲ್ಲಿ ಸೃಷ್ಟಿಿಸುವ ವ್ಯಸನ ಅಥವಾ ಚಟದ ಕುರಿತು ಅದಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಈಗ ಒಂದೆರಡು ದಶಕಗಳಿಂದ ಜನಪ್ರಿಿಯವಾಗುತ್ತಿಿರುವ ವಿಡಿಯೋ ಗೇಮ್ ಮತ್ತು ಆನ್‌ಲೈನ್ ಗೇಮ್‌ಗಳು, ಇದೇ ರೀತಿಯ ಚಟವನ್ನು, ಗೀಳನ್ನು, ಅಡಿಕ್ಷನ್‌ನ್ನು ಉಂಟುಮಾಡುತ್ತವೆ ಎಂದು ಹಲವು ಮನೋವೈಜ್ಞಾಾನಿಕ ಅಧ್ಯಯನಗಳು ಪುರಾವೆ ಸಹಿತ ಋಜುವಾತು ಮಾಡಿವೆ. ಈ ಕುರಿತು ಮನೋವೈದ್ಯರು ಸಮಾಜವನ್ನು ಎಚ್ಚರಿಸಿದ್ದಾಾರೆ. ವಿಡಿಯೋ ಗೇಮ್‌ಗಳ ಗೀಳು, ವ್ಯಸನ ಅಂಟಿಸಿಕೊಂಡವರು ಮನೋವೈದ್ಯರ ಸಲಹೆಯನ್ನು ಪಡೆಯುವ ಪ್ರಕ್ರಿಿಯೆಯು ಇಂದು ಸಾಮಾನ್ಯ ಎನಿಸಿದೆ.
ಆದರೆ, ನಮ್ಮ ದೇಶದ ಜನರಿಗೆ, ಯುವಕರಿಗೆ, ಹೆತ್ತವರಿಗೆ, ಪೋಷಕರಿಗೆ ವಿಡಿಯೋ ಗೇಮ್ ಅಡಿಕ್ಷನ್ ಪ್ರಪಂಚದ ಕರಾಳ ಹೆಜ್ಜೆೆಗಳ ಪರಿಚಯ ಸಾಕಷ್ಟು ಪ್ರಮಾಣದಲ್ಲಿ ಇಲ್ಲವೆಂದೇ ಹೇಳಬೇಕು.

ಅದರಲ್ಲೂ ಮುಖ್ಯವಾಗಿ, ನಮ್ಮ ದೇಶದ ಮಧ್ಯಮ ವರ್ಗದ ಪೋಷಕರಿಗೆ ತಮ್ಮ ಮಕ್ಕಳು ಕ್ರಮೇಣ ವಿಡಿಯೋಗೇಮ್ ಗೀಳಿಗೆ ಒಳಗಾಗುತ್ತಿಿರುವ ವಿಚಾರದ ಗಂಭಿರತೆಯ ಅರಿವಿಲ್ಲ ಎಂದು ತಜ್ಞರು ಗುರುತಿಸಿದ್ದಾಾರೆ. ಹಿಂದಿನ ದಿನಗಳಲ್ಲಿ ಮಕ್ಕಳ ಕೈಯಲ್ಲಿ ಆಟಿಕೆ ಹೇಗಿತ್ತೋೋ, ಇಂದು ಸ್ಮಾಾರ್ಟ್‌ಫೋನ್‌ಗಳು ಆ ಸ್ಥಾಾನವನ್ನು ಅಲಂಕರಿಸಿವೆ. ಸ್ಮಾಾರ್ಟ್‌ಫೋನ್‌ಗಳಲ್ಲಿ ಅಂತರ್ಜಾಲದ ಮೂಲಕ ದೊರೆಯುವ ಹಾಡು, ನೃತ್ಯ, ಜ್ಞಾಾನ, ಪ್ರಾಾಜೆಕ್‌ಟ್‌ ವರ್ಕ್ ಸಲಹೆ, ಅದಕ್ಕೆೆ ಅಗತ್ಯ ಎನಿಸುವ ಗ್ರಾಾಫ್, ಚಿತ್ರಗಳು – ಇವೆಲ್ಲವುಗಳ ಜತೆ, ಅದೇ ಸ್ಮಾಾರ್ಟ್‌ಫೋನ್‌ನಲ್ಲಿ ಅಡಗಿರುವ ಕರಾಳ ಜಗತ್ತಿಿನ ಒಂದು ಮುಖವೇ ವಿಡಿಯೋ ಗೇಮ್ ಮತ್ತು ಆನ್‌ಲೈನ್ ಗೇಮ್‌ಗಳು.

ವಿಡಿಯೋ ಗೇಮ್ ತಯಾರಕರು ಅವುಗಳಲ್ಲಿ ಅಡಿಕ್ಷನ್ ಗುಣವನ್ನು ಬೆರೆಸಿ ಬಿಡುಗಡೆ ಮಾಡುತ್ತಿಿರುವ ವಿಚಾರ ಜಗಜ್ಜಾಾಹೀರು. ಜತೆಗೆ, ಅಡಿಕ್ಷನ್ ಗುಣ ಇಲ್ಲ ಎಂದಾದರೆ, ಅಂತಹ ವಿಡಿಯೋ ಗೇಮ್‌ಗಳು ಕ್ರಮೇಣ ಜನಪ್ರಿಿಯತೆ ಕಳೆದುಕೊಳ್ಳುತ್ತವೆ. ಅವುಗಳ ಮಾರಾಟ ಕಡಿಮೆಯಾಗುತ್ತದೆ. ಹೆಚ್ಚು ಲಾಭ ಗಳಿಸುವ ಉದ್ದೇಶದಿಂದ, ರೋಚಕತೆಯನ್ನು ಮೈಗೂಡಿಸಿಕೊಂಡಿರುವ ವಿಡಿಯೋ ಮತ್ತು ಆನ್‌ಲೈನ್ ಗೇಮ್‌ಗಳೇ ಮಕ್ಕಳಲ್ಲಿ ಮತ್ತು ಯುವಕರಲ್ಲಿ ಗೀಳನ್ನು ಸೃಷ್ಟಿಿಸುತ್ತವೆ.

ಕೆಲವು ವಿಡಿಯೋ ಗೇಮ್‌ಗಳನ್ನು ಸಿಡಿ ಮೂಲಕವೋ, ಆನ್‌ಲೈನ್‌ನಲ್ಲೋೋ ಖರೀದಿಸಿ, ಸ್ಮಾಾರ್ಟ್‌ಫೋನ್‌ಗಳಲ್ಲಿ ಅಳವಡಿಸಿ ಆಟವಾಡಬಹುದು. ಇನ್ನು ಕೆಲವು ಉಚಿತ ಎಂದು ಬಿಡುಗಡೆಯಾಗುತ್ತವೆ. ಆರಂಭದಲ್ಲಿ ಉಚಿತವಾಗಿ ಸಿಗುವ ಇಂತಹ ಆಟಗಳನ್ನು ಆಡುವ ಮಕ್ಕಳು, ಕ್ರಮೇಣ ಅದರಲ್ಲಿರುವ ಮತ್ತು ಅಗತ್ಯ ಎನಿಸುವ ಹೊಸ ಹೊಸ ಫೀಚರ್‌ಗಳನ್ನು ಹಣಕೊಟ್ಟು ಖರೀದಿಸಬೇಕಾಗುತ್ತದೆ. ಪೋಷಕರು ಮೊದಲಿಗೆ ಉಚಿತ ಗೇಮ್ ಎಂದು ಸುಮ್ಮನಿದ್ದರೂ, ಕ್ರಮೇಣ ಮಕ್ಕಳ ಕಾಟ ತಾಳಲಾರದೆ ಸಣ್ಣ ಮೊತ್ತದ ಹಣ ನೀಡಿ ಹೆಚ್ಚಿಿನ ಟೀರ್ಚ ಖರೀದಿಸಲು ಅವಕಾಶ ಮಾಡಿಕೊಡುತ್ತಾಾರೆ ಅಥವಾ ಮಕ್ಕಳು ತಮಗೆ ನೀಡಿದ ಪಾಕೆಟ್ ಮನಿಯನ್ನು ಇದಕ್ಕೆೆ ವ್ಯಯ ಮಾಡುವುದುಂಟು. ಯುವಕರು ಸಹ ಆನ್‌ಲೈನ್ ಮೂಲಕ ಹಲವು ರೀತಿಯ ಗೇಮ್‌ಗಳನ್ನು ವಿಚಾರಗಳನ್ನು ಸಾಕಷ್ಟು ಹಣ ವ್ಯಯ ಮಾಡಿ ಖರೀದಿಸುತ್ತಾಾರೆ. ಆಟವಾಡುವವರಲ್ಲಿ ಬೆಳೆಯುವ ವ್ಯಸನ ಮತ್ತು ಅಡಿಕ್ಷನ್‌ನಿಂದಾಗಿ ಅಂತಹ ಆಟಗಳನ್ನು ತಯಾರಿಸುವ ಸಂಸ್ಥೆೆಗೆ ಹಣ ಗಳಿಕೆಗೆ ದಾರಿಯಾಗುತ್ತದೆ. ಹಲವು ಅಧ್ಯಯನಗಳ ಪ್ರಕಾರ ಇಂದಿನ ಜನರು, ಅಪಾರ ಮೊತ್ತದ ಹಣವನ್ನು ಆನ್‌ಲೈನ್ ಮತ್ತು ವಿಡಿಯೋಗೇಮ್ ಗಳಿಗೆ ಮಾಡುತ್ತಿಿದೆ.
ಇದಕ್ಕೆೆ ಮುಖ್ಯ ಕಾರಣ ಆಹಾರಗಳಲ್ಲಿರುವ ಅಡಿಕ್ಷನ್ ಗುಣ. ಇತ್ತೀಚೆಗೆ ಪಬ್ಜಿಿ ಎಂಬ ಆಟವನ್ನು ಎಡೆಬಿಡದೆ ದಿನವಿಡಿ ಆಟವಾಡಿದ ವಿದ್ಯಾಾರ್ಥಿಯೊಬ್ಬ ಉದ್ವೇಗ ತಾಳಲಾರದೆ ಮೃತಪಟ್ಟ ಸುದ್ದಿ ಭಾರತದಿಂದಲೇ ವರದಿಯಾಯಿತು. ಆನ್‌ಲೈನ್ ಆಟಗಳು ನಮ್ಮ ವಿದ್ಯಾಾರ್ಥಿಗಳಲ್ಲಿ ಮತ್ತು ಇತರರಲ್ಲಿ ಯಾವ ಮಟ್ಟದ ಅಡಿಕ್ಷನ್ ಗುಣ ಅಥವ ವ್ಯಸನವನ್ನು ಸೃಷ್ಟಿಿಮಾಡಿವೆ ಎಂಬುದಕ್ಕೆೆ ಇದೊಂದು ದುರಂತ ಉದಾಹರಣೆ. ನಮ್ಮ ದೇಶದಲ್ಲೂ ಸಹ ವಿಡಿಯೋ ಮತ್ತು ಆನ್‌ಲೈನ್ ಆಟಗಳ ಜನಪ್ರಿಿಯತೆ ಕ್ರಮೇಣ ಹೆಚ್ಚುತ್ತಿಿದೆ. ಇಂದು ಸ್ಮಾಾರ್ಟ್ಫೋೋನ್ಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತಿಿದ್ದು, ಅತಿ ಅಗ್ಗ ಎನಿಸುವ ಬೆಲೆಯಲ್ಲಿ ಡಾಟಾ ಸಹ ದೊರೆಯುತ್ತಿಿರುವುದರಿಂದ,ತಂತ್ರಜ್ಞಾಾನದ ಸದ್ಬಳಕೆಯ ಜೊತೆಯಲ್ಲಿ ವಿಡಿಯೋ ಗೇಮ್‌ಗಳ ಪಿಡುಗು ಸಹ ಹೆಚ್ಚುತ್ತಿಿದೆ.

ದುಷ್ಪರಿಣಾಮಗಳು

ಅಧ್ಯಯನ ನಿರತ ವಿದ್ಯಾಾರ್ಥಿಗಳಲ್ಲಿ ವಿಡಿಯೋಗೇಮ್ ಸಾಕಷ್ಟು ದುಷ್ಪರಿಣಾಮಗಳನ್ನು ಉಂಟು ಮಾಡುತ್ತಿಿರುವುದನ್ನು ಮನೋತಜ್ಞರು ಗುರುತಿಸಿದ್ದಾರೆ. ವಿದ್ಯಾಾರ್ಥಿಗಳ ಮನಸ್ಸು ಸದಾಕಾಲ ಆಟದಲ್ಲಿ ಮಗ್ನವಾಗಿ ಇರುವುದರಿಂದ ಚಂಚಲತೆ ಮೂಡಿಬಂದು ಅಧ್ಯಯನ ಮತ್ತು ಇತರ ಚಟುವಟಿಕೆಗಳ ಕುರಿತು ಅವರ ಆಸಕ್ತಿಿ ಕಡಿಮೆಯಾಗಿರುವುದರಿಂದ ಅಪಾರ ಹಾನಿ ಉಂಟಾಗುತ್ತದೆ ಎನ್ನುತ್ತಾಾರೆ ಮನೋವೈದ್ಯರು.
ಹಿಂಸೆಯ ಎಳೆಗಳನ್ನು ಹೇಳಿ ಮನಸ್ಸಿಿನಲ್ಲಿ ಬಿತ್ತುವುದು ಈ ಆಟಗಳ ಮತ್ತೊೊಂದು ದುಷ್ಪರಿಣಾಮ. ಪಬ್ಜಿಿ ಅಂತಹ ಹಲವು ಆನ್‌ಲೈನ್ ಆಟಗಳಲ್ಲಿ ಬಂದೂಕು ಬಳಸಿ ಆಟಗಾರರನ್ನು ಕೊಲ್ಲುವಂತಹ ಚಟುವಟಿಕೆಗಳು ಇರುವುದರಿಂದಾಗಿ ಬಳಕೆದಾರರಲ್ಲಿ ಹಿಂಸೆಯನ್ನು ಪ್ರಚೋದಿಸುತ್ತವೆ. ನಿರಂತರವಾಗಿ ಇಂತಹ ಆಟಗಳನ್ನು ಆಡುತ್ತಾಾ ಬೆಳೆಯುವವರು ಹಿಂಸಾ ಮಾರ್ಗದಲ್ಲಿ ಯೋಚಿಸುವಂತಾಗುತ್ತದೆ ಎಂದು ಹಲವು ಅಧ್ಯಯನಗಳು ಗುರುತಿಸಿವೆ.
ನಿರಂತರವಾಗಿ ತಮ್ಮ ಸ್ಮಾಾರ್ಟ್ ಫೋನ್ ಳಲ್ಲಿ ಆಟವಾಡುವ ವಿದ್ಯಾಾರ್ಥಿಗಳು ಮತ್ತು ಯುವಕರು ಅನುಭವಿಸುವ ಮತ್ತೊೊಂದು ತೊಂದರೆ ಎಂದರೆ ನಿದ್ರಾಾಹೀನತೆ . ಗಂಟೆಗಟ್ಟಲೆ ಮೊಬೈಲ್ ಸ್ಕ್ರೀನ್ ನೋಡುವುದರಿಂದ ನಿದ್ರಾಾಹಾನಿ ಉಂಟಾಗಿ ಅದು ನಂತರ ದಿನಗಳಲ್ಲಿ ಇತರ ದೈಹಿಕ ಮತ್ತು ಮಾನಸಿಕ ಸಮಸ್ಯೆೆಗಳಿಗೆ ದಾರಿ ಮಾಡಿಕೊಡುತ್ತದೆ.
ಎಚ್ಚರಿಕೆ

ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳ ಸ್ಮಾಾರ್ಟ್ಫೋೋನ್ ಚಟುವಟಿಕೆಗಳನ್ನು ಗಮನಿಸುವ ಕೆಲಸವನ್ನು ಅಗತ್ಯವಾಗಿ ಮಾಡಬೇಕು. ವಿದ್ಯಾಾರ್ಥಿಗಳು ತಮ್ಮ ಪಠ್ಯ ಅಧ್ಯಯನದ ನಂತರ ಗಂಟೆಗಟ್ಟಳ ಮೊಬೈಲ್ ಹಿಡಿದು ಕುಳಿತರು ಎಂದರೆ ಒಂದು ಅವರು ವಿಡಿಯೋಗೇಮ್ ಗೀಳಿಗೆ ಒಳಗಾಗಿದ್ದಾರೆ ಅಥವಾ ಸಾಮಾಜಿಕ ಜಾಲತಾಣಗಳ ನಿರಂತರ ಬಳಕೆಯ ಚಟಕ್ಕೆೆ ಬಿದ್ದಿದ್ದಾರೆ. ಇವೆರಡೂ ಸಾಕಷ್ಟು ಹಾನಿಕರ. ಅದರಲ್ಲೂ ಆನ್‌ಲೈನ್ ಗೇಮ್ ಮತ್ತು ವಿಡಿಯೋ ಗೇಮ್‌ಗಳ ಚಟವು ಇನ್ನಷ್ಟು ಹಾನಿಕರ. ವಿದ್ಯಾಾರ್ಥಿಗಳ ಜೊತೆ ಯುವಕರು ವಯಸ್ಕರು ಸಹ ಈ ರೀತಿಯ ಅಡಿಕ್ಷನ್ ಗೆ ಒಳಗಾಗುವ ಸಾಧ್ಯತೆ ಇದೆ. ಇದನ್ನು ಗಮನಕ್ಕೆೆ ತಂದುಕೊಂಡು ವಿಡಿಯೋ ಗೇಮ್‌ಗಳ ಅಡಿಕ್ಷನ್‌ಗೆ ನಮ್ಮ ಸಮಾಜ ಒಳಗಾಗದಂತೆ ಕಾಪಾಡಿಕೊಳ್ಳುವುದು ಪೋಷಕರ, ವಿದ್ಯಾಾರ್ಥಿಗಳ ಮತ್ತು ಎಲ್ಲರ ಕರ್ತವ್ಯ ಎನಿಸಿದೆ.

Leave a Reply

Your email address will not be published. Required fields are marked *