Monday, 30th January 2023

ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸಲು ವಿರೋಧ: ಯುವಕನ ಹತ್ಯೆ

ಮುಂಬೈ: ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸುವುದನ್ನು ವಿರೋಧಿಸಿದ ಯುವಕನನ್ನು ಅಪ್ರಾಪ್ತ ಬಾಲಕರು ಚಾಕುವಿನಿಂದ ಇರಿದು ಕೊಂದಿದ್ದಾರೆ.

ಆರೋಪಿಗಳಲ್ಲಿ 14 ಮತ್ತು 15 ವರ್ಷದ ಇಬ್ಬರನ್ನು ಬಂಧಿಸಲಾಗಿದ್ದು, 12 ವರ್ಷದ ಮೂರನೇ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ. ಮೃತನನ್ನು ಸುನಿಲ್ ನಾಯ್ಡು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಾಜಿ ನಗರದ ಪಾರೇಖ್ ಕಾಂಪೌಂಡ್ ಬಳಿಯ ತೆರೆದ ಮೈದಾನದಲ್ಲಿ 12 ವರ್ಷದ ಬಾಲಕ ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸುತ್ತಿದ್ದಾಗ, ನಾಯ್ಡು ಅದನ್ನು ವಿರೋಧಿಸಿದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಇದಾದ ಕೆಲವೇ ಹೊತ್ತಿಗೆ ಈ ಬಾಲಕ ತನ್ನ 5 ವರ್ಷದ ಸಹೋದರ ಮತ್ತು 14 ವರ್ಷದ ಸ್ನೇಹಿತನೊಂದಿಗೆ ಸೇರಿಕೊಂಡರು ಸಂತ್ರಸ್ತನನ್ನು ಥಳಿಸಿದ್ದಾರೆ. ಸುನಿಲ್ ನಾಯ್ಡುಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ನಾಯ್ಡುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

error: Content is protected !!