Monday, 21st September 2020

ಯುವತಿಯರಿಗೆ ಬ್ಲ್ಯಾಕ್‌ಮೇಲ್: ವಂಚಕನ ಬಂಧನ

ಬೆಂಗಳೂರು: ಯುವತಿ ಹೆಸರು ಹಾಗೂ ಭಾವಚಿತ್ರದ ಮೂಲಕ ನಕಲಿ ಇನ್‌ಸ್ಟಾ-ಗ್ರಾಮ್ ಖಾತೆ ತೆರೆದು, ಯುವತಿಯರ ಸ್ನೇಹ ಬೆಳೆಸಿ ಖಾಸಗಿ ಕ್ಷಣದ ಫೋಟೊ ಪಡೆದು ಹಣ ನೀಡುವಂತೆ ಬ್ಲ್ಯಾಾಕ್‌ಮೇಲ್ ಮಾಡುತ್ತಿಿದ್ದ ವಂಚಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

21 ವರ್ಷದ ಚಂದನ್ ಬಂಧಿತ. ಬಿಕಾಂ ವ್ಯಾಾಸಂಗ ಮಾಡುತ್ತಿದ್ದ ಈತ ಯವತಿ ಹೆಸರಿನಲ್ಲಿ ನಕಲಿ ಇನ್ ಸ್ಟಾಾ-ಗ್ರಾಾಂ ಖಾತೆ ತೆಗೆದು, ಸುಂದರ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಅವರೊಂದಿಗೆ ಸಲುಗೆಯಿಂದ ಮಾತನಾಡಿ, ಅವರ ಖಾಸಗಿ ಕ್ಷಣಗಳ ಭಾವಚಿತ್ರ ಪಡೆದು ಹಣ ನೀಡುವಂತೆ ಬ್ಯ್ಲಾಾಕ್‌ಮೇಲ್ ಮಾಡುತ್ತಿಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಯುವತಿಯೊಬ್ಬಳು ತನಗೆ 15 ಸಾವಿರ ರು. ನೀಡುವಂತೆ ಆತ ಬೇಡಿಕೆ ಇಟ್ಟಿದ್ದು, 500 ರು.ನ್ನು ಆತನ ಖಾತೆಗೆ ವರ್ಗಾವಣೆ ಮಾಡಿರುವುದಾಗಿ ದೂರು ನೀಡಿದ್ದರು. ಅದರನ್ವಯ ತನಿಖೆ ಕೈಗೊಳ್ಳಲಾಗಿತ್ತು. ಹಣ ಸಂಪಾದನೆ ಮಾಡುವ ದುರಾಸೆಯಿಂದ ಆತ ಈ ಮಾರ್ಗ ಅನುಸರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *