Friday, 27th May 2022

ಟೀಂ ಇಂಡಿಯಾಕ್ಕೆ ಮರಳಲಿದ್ದಾರೆ ಯುವಿ !

ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ, ವಿಶ್ವಕಪ್ ಹಿರೋ ಯುವರಾಜ್ ಸಿಂಗ್ ಅವರು ಮತ್ತೆ ಕ್ರಿಕೆಟ್ ಗೆ ಮರಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಯುವರಾಜ್ ಸಿಂಗ್ ಸುಳಿವು ನೀಡಿದ್ದಾರೆ.

ಫೆಬ್ರವರಿಯಲ್ಲಿ ಪಿಚ್‌ಗೆ ಹಿಂತಿರುಗುವ ಬಗ್ಗೆ ಆಶಾದಾಯಕವಾಗಿದ್ದೇನೆ! ಭಾರತ ವನ್ನು ಬೆಂಬಲಿಸುತ್ತಾ ಇರಿ, ಇದು ನಮ್ಮ ತಂಡ ಮತ್ತು ನಿಜವಾದ ಅಭಿಮಾನಿ ಕಠಿಣ ಸಮಯದಲ್ಲಿ ಅವನ ಬೆಂಬಲವನ್ನು ತೋರಿಸುತ್ತಾನೆ” ಎಂದಿದ್ದಾರೆ.

39 ವರ್ಷದ ಪ್ರಾಯದ ಯುವರಾಜ್ ಸಿಂಗ್ ಭಾರತದ ನಿಗದಿತ ಕ್ರಿಕೆಟ್ ಮಾದರಿಯ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. 2011ರ ವಿಶ್ವಕಪ್ ನಲ್ಲಿ ಭಾರತದ ವಿಜಯಕ್ಕೆ ಯುವಿ ಪ್ರಮುಖ ಕಾರಣರಾಗಿದ್ದರು. ಆ ವಿಶ್ವಕಪ್ ನಲ್ಲಿ 362 ರನ್ ಗಳಿಸಿದ್ದ ಯುವಿ, 15 ವಿಕೆಟ್ ಗಳನ್ನೂ ಕಬಳಿಸಿದ್ದರು. ಬಳಿಕ ಯುವಿ ಕ್ಯಾನ್ಸರ್ ಗೆ ತುತ್ತಾಗಿದ್ದರು.