Friday, 3rd February 2023

ಜಿಲ್ಲಾ ಕಸಾಪ ಚುನಾವಣೆ: ಸೋಷಿಯಲ್ ಮೀಡಿಯಾ ಪ್ರಚಾರದ ಮೊರೆ ಹೋದ ಮಾಧ್ಯಮ 

ವಿಶೇಷ ವರದಿ : ಆನಂದಸ್ವಾಮಿ ಹಿರೇಮಠ

ಮಾನವಿ : ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಮೇ 9ರಂದು ನಡೆಯಲಿದ್ದು ಜಿಲ್ಲೆಯಾದ್ಯಂತ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು ,ಸಂಪಾದಕರು,ಪತ್ರಕರ್ತರು,ಸರ್ಕಾರಿ ಶಾಲಾ ಶಿಕ್ಷಕರು ,ಖಾಸಗಿ ಶಾಲಾ ಶಿಕ್ಷಕರು, ಖಾಸಗಿ ಕಾಲೇಜುಗಳ ಪ್ರಾಂಶುಪಾಲರು, ಸಂಸ್ಥೆಗಳ ವ್ಯವಸ್ಥಾ ಪಕರು ಮತ್ತು ಸಾಹಿತ್ಯಾಭಿಮಾನಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿ ದ್ದಾರೆ.

ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚುನಾವಣೆಗೆ ಈಗಾಗಲೆ ನಾಲ್ಕೈದು ಆಕಾಂಕ್ಷಿಗಳು ಅಂದರೆ, ಭೀಮನ ಗೌಡ ಇಟಗಿ, ಮಲ್ಲಿಕಾರ್ಜುನ ಶಿಖರಮಠ, ರಂಗಪ್ಪ ಪಾಟೀಲ್‌ ಅಳ್ಳುಂಡಿ, ಪಲಗುಲ ನಾಗರಾಜ್ ಈ ಸ್ಫರ್ಧಿಗಳ ಪರವಾಗಿ ಜಿಲ್ಲಾದ್ಯಂತ ಚುನಾ ವಣಾ ಪ್ರಚಾರ ಸಭೆಗಳು ಶಾಲಾ -ಕಾಲೇಜುಗಳಲ್ಲಿ ಜರುಗುತ್ತಿವೆ.

ಹಿರಿಯ ಸಾಹಿತಿಗಳು ಯುವ ಸಾಹಿತ್ಯಾಭಿಮಾನಿಗಳು ಅಜೀವ ಸದಸ್ಯರ ಓಲೈಕೆಗಾಗಿ ಶಾಸಕರ ಮೊರೆ ಹೋಗುತ್ತಿರುವುದು ಪ್ರಸ್ತುತ ಜಿಲ್ಲಾ ಕನ್ನಡ ಸಾಹಿತ್ಯ ಚುನಾವಣೆಯಲ್ಲಿ ಇತ್ತಿಚ್ಛಿಗೆ ಬೆಳೆಯುತ್ತಿರುವ ನೋಟ ಗಳು, ಅಖಂಡ ಮಾನವಿ ತಾಲೂಕಿನಲ್ಲಿ ಅಂದರೆ ಸಿರ ವಾರ ಸೇರಿದಂತೆ 1800 ಹೆಚ್ಚು ಅಜೀವ ಸದಸ್ಯರು ಇದ್ದುದರಿಂದ ಪ್ರಸ್ತುತ ಮಾನವಿಯಲ್ಲಿ ಪ್ರಚಾರದ ಭರಾಟೆ ಹೆಚ್ಚಾಗಿದೆ ಅಂದರೆ ತಪ್ಪಾಗಲಿಕ್ಕಿಲ್ಲ,

ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷಿಯ ಗದ್ದುಗೆ ಯಾರ ಸ್ವತ್ತು ಅಲ್ಲ, ಅಜೀವ ಸದಸ್ಯರು ಯಾರಿಗೆ ಆಶೀರ್ವಾದ ನೀಡುತ್ತಾರೋ, ಕನ್ನಡಮ್ಮನ ಸೇವೆಗೈಯ್ಯಲು ಸೂಕ್ತ ಪ್ರತಿನಿಧಿಗೆ ಅವಕಾಶ ನೀಡುತ್ತಾರೆ ಎಂಬುವುದು ಅಜೀವ ಸದಸ್ಯ ಮತರದಾರನಿಗೆ ಬಿಟ್ಟಿರುವ ವಿಚಾರ ,ಆದರೆ ಸಾಹಿತ್ಯ ಚುನಾವಣೆ ಪ್ರಚಾರ ಪ್ರಮಾಣಿಕ ಸೇವೆ ಯೋ, ಅಥವಾ ಜಾತೀ ಯಾಧರಿತೋ ಅಥವಾ ಯುವ ಸಾಹಿತಿಗಳ ಪ್ರೋತ್ಸಾಹಕ್ಕೂ ಎಂಬ ಗೊಂದಲ ಅಜೀವ ಸದಸ್ಯರಿಗಷ್ಟೇ ಅಲ್ಲದೇ ಜನಸಾಮಾನ್ಯ ರಿಗೆ ಗೊಂದಲ ಸೃಷ್ಟಿಯಾಗಿದೆ.

ಸಂಪಾದಕರು /ಪತ್ರಕರ್ತರು ಭರ್ಜರಿ ಪ್ರಚಾರ : ಒಂದು ಸಾಹಿತ್ಯ ಚುನಾವಣೆ ಈ ಮಟ್ಟಿಗೆ ಪ್ರಚಾರದ ಅವಶ್ಯಕವಿರುತ್ತದೆ ಎಂದು ಯಾವೊಬ್ಬ ಜನಸಾಮಾನ್ಯನು ಊಹೆ ಮಾಡಿರಲಿಲ್ಲ. ಅಷ್ಟರ ಮಟ್ಟಿಗೆ ಸಂಪಾದಕ /ಪತ್ರಕರ್ತರು ತಮ್ಮ ತಮ್ಮ ಬೆಂಬಲವನ್ನು ವ್ಯಕ್ತಿಪರವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸಾಹಿತಿಗಳೆಂದರೆ ವಿಚಾರ ವಂತರೂ, ಬುದ್ದಿಜೀವಿಗಳು, ಉತ್ತಮ ಸಮಾಜ ಕಟ್ಟುವಲ್ಲಿ ಸಾಹಿತಿಗಳ ಬರವಣಿಗೆ ತುಂಬಾನೆ ಪ್ರಭಾವ ಬೀರುವಂತದ್ದು,ಇಲ್ಲಿ ಸಿರಿವಂತನು ಸಾಮಾನ್ಯ ನಂತಿರುತ್ತಾರೆ.

ಖಡ್ಗಕಿಂತ ಹರಿತವಾದದ್ದು ಲೇಖನಿ ಅಂತಾರೆ. ಲೇಖನಿಗಳ ಮೂಲಕ ಸಮಾಜ ಸುಧಾರಣೆ ಯಾಗಬೇಕು, ಉತ್ತಮ ವಿಚಾರ ವಂತರು, ತಮ್ಮ ವಿಚಾರಗಳು ಸಮಾಜದಲ್ಲಿ ಪ್ರಜ್ವಲಿಸುವಂತೆ ಆಗಬೇಕು ಹೊರತು, ಹಣ, ಹೆಣ್ಣು, ಹೊನ್ನು, ಮಣ್ಣಿಗೆ ಇಷ್ಟ ಪಡುವ ವಿಚಾರಗಳು ಸಾಹಿತ್ಯ ರಂಗಕ್ಕೆ ಮಾರಕವಾದದ್ದು. ಪ್ರಸ್ತುತ ಸಾಹಿತ್ಯ ಕ್ಷೇತ್ರ ಇವುಗಳಿಂದ ಮಿಗಿಲಿಲ್ಲ. ಕನ್ನಡ ನಾಡು, ನುಡಿ, ಜಲ, ಹೆಣ್ಣಿನ ರಕ್ಷಣೆ ಬಗ್ಗೆ ತುಟಿ ಬಿಚ್ಚದ ಕೆಲವರು ಕೇವಲ ಸಾಹಿತ್ಯ ಚುನಾವಣೆಯ ನೆಪವೊಡ್ಡಿ ಹೊರಬರುತ್ತಿದ್ದಾರೆ.

ಖಾಸಗಿ ಶಾಲಾ-ಕಾಲೇಜು, ಅನ್ನದೇ ಆಂಗ್ಲ ಮಾಧ್ಯಮದ ಶಾಲೆಯನ್ನದೇ ತಮ್ಮ ಅಭ್ಯರ್ಥಿಗಳ ಪರವಾಗಿ, ಆಕಾಂಕ್ಷಿಗಳ ಪರವಾಗಿ ಸಭೆ ಸಮಾರಂಭಗಳು, ‌ಅಷ್ಟೇ ಅಲ್ಲದೇ ಗುಂಡು ತುಂಡುಗಳೊಟ್ಟಿಗೆ ಜಿಲ್ಲಾ ಕನ್ನಡ ಸಾಹಿತ್ಯ ಚುನಾವಣೆ ಕುರಿತು ಡಾಬಾಗಳಲ್ಲಿ ಚರ್ಚೆಯಾಗುತ್ತಿವೆ. ಈ ಬೆಳವಣಿಗೆ ಮಾನವಿಯಲ್ಲಿ ಕಂಡುಬರುತ್ತಿವೆ.

ದಲಿತ ಸಾಹಿತಿಗಳ ಗುಂಪುಗಳು ತುಂಡು-ತುಂಡಾಗಿವೆ : ದಲಿತರು ಶೈಕ್ಷಣಿಕವಾಗಿ,ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಹಿತ್ಯಿಕವಾಗಿ ಮುಂದೆ ಬರಲು ದಲಿತ ಸಮುದಾಯದ ಒಗ್ಗಟ್ಟು ತುಂಬಾ ಪ್ರಮುಖವಾದದ್ದು. ಆದರೆ ಜಿಲ್ಲೆಯಲ್ಲಿ ದಲಿತ ಸಾಹಿತಿಗಳು ಒಗ್ಗಟ್ಟು ಪ್ರದರ್ಶನ ತೋರದೆ ನಾಲ್ಕು ದಿಕ್ಕುಗಳಾಗಿ ಹಂಚಿ ಹೋಗಿವೆ.

ಇಲ್ಲಿ ದಲಿತ ಎಂಬ ಮಾತು ಏಕೆ ಬಂತೆಂದರೆ ಇನ್ನೂ ಒಂದುವಾರದಲ್ಲಿ ದಲಿತ ಸಾಹಿತಿಯೊಬ್ಬರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ಸ್ಫರ್ಧಿಸಲಿದ್ದಾರೆ ಎಂಬ ಪಿಸುಮಾತುಗಳು ಕೇಳಿ ಬರ್ತಿವೆ. ಈ ಸಾಹಿತ್ಯರಂಗವು ರಾಜಕೀಯ ರಂಗದಂತೆ ಸೇವೆಯ ಹೆಸರಲ್ಲಿ ಹಣದ ಚಿಂತೆಯಾಗಿ ಪರಿರ್ವನೆಯಾಗಿಬಿಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

error: Content is protected !!