Wednesday, 1st February 2023

ಈರುಳ್ಳಿ ತುಂಬಲು ಬೆಂಗಳೂರಿಂದ ಬಂದ ಲಾರಿ ತಡೆದ ಮಹಿಳೆ

ವಿಶ್ವವಾಣಿ ಸುದ್ದಿಮನೆ

ವಿಜಯಪುರ :

ಬೆಂಗಳೂರಿನಿಂದ ಬಂದಿದ್ದ ಲಾರಿಯನ್ನು ಮಹಿಳೆಯೊಬ್ಬಳು ತಡೆದು ನಿಲ್ಲಿಸಿದ ಘಟನೆ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದಲ್ಲಿಸೋಮವಾರ ನಡೆದಿದೆ.

ಗ್ರಾಮದ ರಜಿಯಾ ಬಿಜಾಪುರ ಎಂಬುವರೆ ಲಾರಿಯನ್ನು ತಡೆದು ನಿಲ್ಲಿಸಿದ ದಿಟ್ಟ ಮಹಿಳೆ. ಈರುಳ್ಳಿ ತುಂಬಲು ಗೊಳಸಂಗಿ ಗ್ರಾಮಕ್ಕೆ ಬಂದ ಲಾರಿಯನ್ನು ರಸ್ತೆಯ ಮೇಲೆ ಮುಳ್ಳು ಕಂಟಿ ಇಟ್ಟು ಲಾರಿ ತಡೆದು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾಳೆ.

ನೀವು ಎಲ್ಲಿಂದ ಬಂದಿದ್ದಿರಿ ? ಕರೋನಾ ಇರುವದು ಮೊದಲೆ ಗೊತ್ತಿಲ್ಲವೆ ನಿಮಗೆ ? ಗಾಡಿ ಎಲ್ಲಾ ಬಂದ್ ಅಂದ್ರೆ ಬಂದ್ ಅಷ್ಟೆ, ಎಲ್ಲಾ ಗಾಡಿ ಊರೊಳಗ ಬರುದು ಬಂದ್, ಲಾರಿ ಚಾಲಕ – ಕ್ಲಿನರ್ ಎಲ್ಲಿಂದ ಬರ್ತಾರೆ ಯಾರಿಗೆ ಗೊತ್ತು. ಪೊಲೀಸರು ಲಾಠಿ ಚಾರ್ಜ ಮಾಡಿದರೂ ಬುದ್ದಿ ಬರ್ತಾ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಈ ವೇಳೆ ಲಾರಿ ಚಾಲಕ ಹಾಗೂ ನಿರ್ವಾಹಕನ ಆರೋಗ್ಯದ ಕುರಿತು ಯಾರು ಗಮನಿಸಿಲ್ಲ. ಗೊಳಸಂಗಿ ಗ್ರಾಮಸ್ಥರು ಬೇರೆ ಊರಿನಿಂದ ಬಂದರೆ ಹೋಂಕ್ವಾರಂಟೈನ್ ನಲ್ಲಿ ಇಡ್ತಾರೆ, ಈ ಲಾರಿ ಚಾಲಕ ಹಾಗೂ ಕ್ಲಿನರ್ ಗೆ ವಿನಾಯಿತಿ ಏಕೆ ಎಂದು ಪ್ರಶ್ನಿಸಿ ಕಿಡಿಕಾರಿದ್ದಾಳೆ.

error: Content is protected !!