Thursday, 19th May 2022

ಕರೋನಾ ತಡೆಗೆ ರೆಡ್ ಕ್ರಾಸ್ ಜಾಗೃತಿ

ಬೆಳಗಾವಿ

ವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಕಾರ್ಯದರ್ಶಿ ಕರೋನಾ ಸೈನಿಕ(ಸ್ವಯಂಸೇವಕ) ಡಿ.ಎನ್.ಮಿಸಾಳೆ ಅವರ ನೇತೃತ್ವದಲ್ಲಿ ನಗರದ ವಿವಿಧ ಪ್ರದೇಶಗಳು ಮತ್ತು ಪೊಲೀಸ್ ಠಾಣೆಗೆ ತೆರಳಿ ಜಾಗೃತಿ ಮೂಡಿಸಿದರು.

ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ಉಪ ವಿಭಾಗ ಬೆಳಗಾವಿ ಕಚೇರಿ ಹಾಗೂ ಕ್ಯಾಂಪ್ ಪೊಲೀಸ್ ಠಾಣೆಗೆ ತೆರಳಿ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ವಿಧಾನ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಎನ್.ಮಿಸಾಳೆ ಅವರು, ಎಲ್ಲ ನಾಗರಿಕರು ಸಹಕರಿಸಿದರೆ ಜಗತ್ತಿನಾದ್ಯಂತ ತಲ್ಲಣ ಮೂಡಿಸಿರುವ ಕೋವಿಡ್-19 ವೈರಸ್ ಹರಡುವಿಕೆ ತಡೆಗಟ್ಟುವುದು ಸುಲಭ ಸಾಧ್ಯ. ಆದ್ದರಿಂದ ಜನರು ಭಯಭೀತರಾಗದೇ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಹೇಳಿದರು.

ಸಂಚಾರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಚಂದ್ರಪ್ಪ, ಕ್ಯಾಂಪ್ ಠಾಣೆಯ ಸಿಪಿಐ ಡಿ.ಸಂತೋಷಕುಮಾರ್‍ಅ ವರನ್ನು ಭೇಟಿ ಮಾಡಿ ಕರೋನಾ ಕುರಿತು ಮಾಹಿತಿಯನ್ನು ನೀಡಿ, ಠಾಣೆಯ ಸಿಬ್ಬಂದಿಗೆ ಜಾಗೃತಿ ಕರಪತ್ರಗಳನ್ನು ವಿತರಿಸಲಾಯಿತು.
ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾದ ಎಲ್.ವಿ. ಶ್ರೀನಿವಾಸನ್ ಮತ್ತಿತರರು ಉಪಸ್ಥಿತರಿದ್ದರು.