ವಿಜಯಪುರ :
ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 3 ಕರೋನಾ ಸೊಂಕಿತ ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಈ ಹಿಂದಿನ 32 ಪ್ರಕರಣ ಸೇರಿ ಒಟ್ಟು ಸೊಂಕಿತರ 35ಕ್ಕೆ ಏರಿಕೆಯಾಗಿದೆ.
ಈ ಪೈಕಿ 14 ವರ್ಷದ ಇಬ್ಬರು ಯುವತಿಯರು ಹಾಗೂ 30 ವರ್ಷದ ಮಹಿಳೆ ಸೇರಿ ಒಟ್ಟು ಮೂವರಿಗೆ ಸೊಂಕು ತಗುಲಿರುವದು ದೃಢಪಟ್ಟಿದೆ.
ಇನ್ನೂ 1169 ಜನರನ್ನು 28 ದಿನದ ರಿಪೊರ್ಟಿಂಗ್ ಪ್ರೀಡ್ಗೆ ಒಳಪಡಿಸಲಾಗಿದೆ. 1೦೦ ಜನ ಐಸೋಲೇಶನ್ ನಲ್ಲಿ ಇದ್ದಾರೆ. 1190 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 604 ಜನರ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.