Friday, 27th May 2022

ಜನಪ್ರತಿನಿಧಿಗಳ ವರ್ತನೆ ತಪ್ಪು ಮಾದರಿ ಆಗಬಾರದು

ಆಗ್ರಹ

ರಮಾನಂದ ಶರ್ಮಾ, ಬೆಂಗಳೂರು
ವರ್ಷಗಳ ಹಿಂದೆ, ಸಂಸದರೊಬ್ಬರು ವೃತ್ತಿಿನಿರತ ವೈದ್ಯರೊಬ್ಬರು ತಮ್ಮ ಬಂಧುವಿಗೆ ಸರಿಯಾಗಿ ಚಿಕಿತ್ಸೆೆ ನೀಡಲಿಲ್ಲವೆಂದು ಅವರ ಮೇಲೆ ಹಲ್ಲೆ ನಡೆಸಿದ್ದರಂತೆ. ಶಾಸಕರೊಬ್ಬರು ಇದೇ ರೀತಿ, ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿಿಲ್ಲವೆಂದು ಅವರ ಮೇಲೆ ಹಲ್ಲೆ ನಡೆಸಿದ್ದರಂತೆ. ಇನ್ನೊೊಬ್ಬ ಜನಪ್ರತಿನಿಧಿ, ಸಾರ್ವಜನಿಕರೆದುರು ಸರಕಾರಿ ನೌಕರನೊಬ್ಬನಿಗೆ 50ಬಸ್ಕಿಿ*(ಜಿಠಿ ್ಠ) ಹೊಡೆಯುವ ಶಿಕ್ಷೆ ನೀಡಿ ಅಟ್ಟ ಹಾಸಗೈದರು. ಉತ್ತರ ಪ್ರದೇಶದಲ್ಲಿ ಟೋಲ್ ನಾಕಾದಲ್ಲಿ ಟೋಲ್ ಕೇಳಿದ್ದಕ್ಕಾಾಗಿ ಟೋಲ್ ಸಿಬ್ಬಂದಿ ಮೇಲೆ ಜನಪ್ರತಿನಿಧಿಯೊಬ್ಬರು ಹಲ್ಲೆ ಮಾಡಿದ್ದು ಇತ್ತೀಚೆಗೆ ವರದಿಯಾಗಿದೆ. ದರು. ಮಧ್ಯಪ್ರದೇಶದಲ್ಲಿ ಆಕಾಶ ವರ್ಗಿಯಾ ಎನ್ನುವ ಪ್ರಮುಖ ರಾಜಕಾರಣಿ ನಗರಸಭೆ ಅಧಿಕಾರಿಯನ್ನು ಕ್ರಿಿಕೆಟ್ ಬ್ಯಾಾಟ್ ನಿಂದ ಹೊಡೆದಿದ್ದಕ್ಕಾಾಗಿ ಅವರನ್ನು ಬಂಧಿಸಲಾಗಿತ್ತು.

ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜಾಮೀನು ಮೇಲೆ ಹೊರಬಂದವರನ್ನುಅವರ ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು. ಮಹಾರಾಷ್ಟ್ರದಲ್ಲಿ ಮಾಜಿ ಮಂತ್ರಿಿಯೊಬ್ಬರ ಮಗ ನಗರಸಭೆ ಅಧಿಕಾರಿಯ ಮೈಮೇಲೆ ಕೆಸರು ಮಣ್ಣು ಸುರಿದು ಧಿಮಾಕು ತೋರಿಸಿದ. ವಿಮಾನ ನಿಲ್ದಾಾಣದಲ್ಲಿ ತಡವಾಗಿ *್ಚಛ್ಚಿಿ ಜ್ಞಿಿ ಗೆ ಬಂದ ಸಂಸದರನ್ನು ತಡೆದ ನಿಲ್ದಾಾಣದ ಸಿಬ್ಬಂದಿಯ ಮೇಲೆ ಸಂಸದರು ಹಲ್ಲೆ ಮಾಡಿದರು. ಇನ್ನೊೊಬ್ಬ ಜನಪ್ರತಿನಿಧಿ ಮಹಿಳೆಯೊಬ್ಬರನ್ನು ಸಾರ್ವಜನಿಕವಾಗಿ ಥಳಿಸಿದರು. ತಮ್ಮ ವಾಹನವನ್ನು ಓವರ್ ಟೇಕ್ ಮಾಡಿದ ವಾಹನ ಸವಾರನನ್ನು ಶಾಸಕರೊಬ್ಬರು ಥಳಿಸಿದ ಉದಾಹರಣೆಯೂ ಇದೆ. ಟೋಲ್ ನಾಕಾದಲ್ಲಿ ಇವರ ಗಲಾಟೆ ತೀರಾ ಸಾಮಾನ್ಯ ಎನ್ನುವಷ್ಟು ವಿಪುಲವಾಗಿ ವರದಿಯಾಗುತ್ತದೆ.

ಈ ಪಟ್ಟಿಿಗೆ ಇತ್ತೀಚಿನ ಸೇರ್ಪಡೆ ಉತ್ತರ ಪ್ರದೇಶದ ಶಾಸಕ ಕುಲದೀಪ ಸೆಂಗಾರ್. ಅವರು ಅತ್ಯಾಾಚಾರದ ಆರೋಪ ಎದುರಿಸುತ್ತಿಿದ್ದಾರೆ. ಸಿನಿಮೀಯ ರೀತಿಯಲ್ಲಿ ಅತ್ಯಾಾಚಾರವಾದ ಮಹಿಳೆಯ ತಂದೆ ಜೈಲಿನಲ್ಲಿ ಸಾಯುತ್ತಾಾರೆ. ಈ ಮಹಿಳೆ ಮತ್ತು ಅಕೆಯ ವಕೀಲರು ನಂಬರ್‌ಪ್ಲೇಟ್ ಗುರುತಿಸಲಾಗದ ಟ್ರಕ್ ಗುದ್ದಿದ ಅಪಘಾತದಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿಿದ್ದಾಾರೆ. ಸಂಸದರೊಬ್ಬರು ವಿರೋಧ ಪಕ್ಷದ ಕೆಲವರನ್ನು ರಕ್ತ ಪಿಪಾಸುಗಳು, ಬೂಟು ನೆಕ್ಕುವವರು, ತಂದೆ ತಾಯಿ ಇಲ್ಲದವರು ಮುಂತಾಗಿ ಟೀಕಿಸಿದ್ದಾಾರೆ. ಇವು ಜನಸಾಮಾನ್ಯರು ಮತ್ತು ಸರಕಾರಿ ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳು ಮತ್ತು ಅವರ ಹಿಂಬಾಲಕರು ದೈಹಿಕ, ಮಾನಸಿಕ ಮತ್ತು ಚಾರಿತ್ರ್ಯ ವಧೆ ಮತ್ತು ದಬ್ಬಾಾಳಿಕೆ ನಡೆಸಿದ ವಿವರಗಳ ಪಟ್ಟಿಿಯ ಸಣ್ಣ ತುಣುಕು ಮಾತ್ರ.

ಎಷ್ಟೋೋ ಇಂತಹ ಸಂದರ್ಭಗಳಲ್ಲಿ ಪೊಲೀಸ್ ಪ್ರಕರಣಗಳು ದಾಖಲಾಗುವುದಿಲ್ಲ. ದಾಖಲಾದರೂ ಅವು ತಾರ್ಕಿಕ ಅಂತ್ಯ ಕಾಣುತ್ತಿಿಲ್ಲ.

ಈ ದಿನಗಳಲ್ಲಿ ಜನಪ್ರತಿನಿಧಿಗಳ ಅಶಿಸ್ತು, ಅತಿರೇಕ ಮತ್ತು ದೌರ್ಜನ್ಯ ಮಿತಿ ಮೀರಿದ್ದು, ಇತ್ತೀಚಿನ ಸಂಸದರ ಸಭೆಯೊಂದರಲ್ಲಿ ಪ್ರಧಾನಿ ನರೆಂದ್ರ ಮೋದಿಯವರು ಇದನ್ನು ಗಂಭೀರವಾಗಿ ಪ್ರಸ್ತಾಾಪಿಸಿದರು. ಹೆಸರು ಹೇಳದೇ ತಪ್ಪಿಿತಸ್ಥರನ್ನು ಗುರಿಮಾಡಿ ಎಚ್ಚರಿಸಿದರು. ಕೆಲವರು ಮಂತ್ರಿಿ ಪದವಿ ಕಳೆದುಕೊಳ್ಳುವುದಕ್ಕೆೆ ಮತ್ತು ಕೆಲವರು ಮಂತ್ರಿಿಗಳಾಗುವ ಅವಕಾಶವನ್ನು ತಪ್ಪಿಿಸಿಕೊಂಡಿರುವುದಕ್ಕೆೆ ಇದೇ ಕಾರಣ ಎನ್ನಲಾಗುತ್ತಿಿದೆ.

ಪ್ರಧಾನಿ ನರೇಂದ್ರ ಮೋದಿಯವರು ಕಟ್ಟುನಿಟ್ಟಿಿನ ಶಿಸ್ತಿಿನ ಮನುಷ್ಯರಾಗಿದ್ದು ಎಲ್ಲವನ್ನು ತಿಳಿದು ಸದ್ದುಗದ್ದಲವಿಲ್ಲದೇ ಮೌನವಾಗಿಯೇ ಕ್ರಮ ತೆಗೆದುಕೊಳ್ಳುತ್ತಾಾರೆ. ಇಂಥವರನ್ನು ಮುಂದಿನ ಸಂಪುಟ ಪುನಾರಚನೆಯ ಸಮಯದಲ್ಲಿ ಮತ್ತು ಮುಂದಿನ ಚುನಾವಣೆಗಳಲ್ಲಿ ಟಿಕೆಟ್ ನೀಡುವಾಗ ಪರಿಗಣಿಸುವುದಿಲ್ಲ ಎಂದು ನಿರ್ದಾಕ್ಷಿಿಣ್ಯವಾಗಿ ಹೇಳಿದ್ದಾರೆ. ಈ ರೀತಿಯ ನಡೆವಳಿಕೆ ಕೇವಲ ಒಂದು ರಾಜಕೀಯ ಪಕ್ಷಕ್ಕೆೆ ಸೀಮಿತವಾಗಿರದೆ, ಪ್ರಾಾದೇಶಿಕ ಪಕ್ಷಗಳೂ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದೆ. ಭಾರತೀಯ ಜನತಾ ಪಕ್ಷ ದೊಡ್ಡ ಪಕ್ಷವಾಗಿರುವುದರಿಂದ ಅವರ ಕೃತ್ಯಗಳು ಹೆಚ್ಚಿಿಗೆ ಕಾಣುತ್ತವೆ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲೂ ಹರಿಯುತ್ತವೆ.

ಚುನಾಯಿತ ಪ್ರತಿನಿಧಿಗಳು ಅಧಿಕಾರದ ಮದದಿಂದ ನಡೆಸುವ ಇಂಥ ಕೃತ್ಯಗಳನ್ನು ನಿಯಂತ್ರಿಿಸುವುದು ಬರಿ ಎಚ್ಚರಿಕೆ ಯಿಂದ ಸಾಧ್ಯವೇ, ಅದಷ್ಟೇ ಸಾಕೇ ಎನ್ನುವ ಜನಸಾಮಾನ್ಯರ ಮತ್ತು ಪ್ರಜ್ಞಾವಂತರ ಪ್ರಶ್ನೆೆಗೆ ಉತ್ತರ ಇನ್ನೂ ದೊರಕಬೇಕಾಗಿದೆ. ಹಾಗೆಯೇ ಎಲ್ಲಾ ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳನ್ನು ಈ ರೀತಿ ನೋಡಲಾಗದು. ಸಂವೇದನಾಶೀಲರು, ಮಾತೃ ಹೃದಯದವರು, ಬಹಳ ನಾಗರಿಕವಾಗಿ ವರ್ತಿಸುವವರು ಸಹ ರಾಜಕಾರಣಿಗಳ ಗುಂಪಿನಲ್ಲಿ ಸಾಕಷ್ಟು ಇದ್ದಾರೆ. ಆದರೆ, ಕುಡಿಕೆ ಹಾಲನ್ನು ಚಿಟಿಕೆ ಹುಳಿ ಕೆಡಿಸಿದಂತೆ ಕೆಲವರ ಕುಕೃತ್ಯ ಎಲ್ಲಾ ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳನ್ನು ಒಂದೇ ಬ್ರಷ್ ನಲ್ಲಿ ಪೇಂಟ್ ಮಾಡುತ್ತದೆ.

ಅಪರಾಧ ಎಸಗುವುದು ಮನುಷ್ಯನ ದೌರ್ಬಲ್ಯಗಳಲ್ಲಿ ಒಂದು. ಪ್ರತಿಬಾರಿಯೂ ಇದು ಉದ್ದೇಶಪೂರ್ವವಾಗಿ ನಡೆಯುವದಿಲ್ಲ. ಕೆಲವು ಬಾರಿ ಒಂದು ಕೆಟ್ಟ ಗಳಿಗೆಯಲ್ಲಿ ಇಂಥವು ಆಗಿಹೋಗುತ್ತವೆ. ಕೆಲವೊಂದು ಅತಿರೇಕದ ವರ್ತನೆಯ ಹಿಂದೆ ಸಾಕಷ್ಟು ಕಾರಣಗಳಿರಬಹುದು. ಆದರೆ, ಇದನ್ನು ಸರಿಗೊಳಿಸುವ ಮಾರ್ಗಗಳೂ ಇರುತ್ತವೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ನಾಗರಿಕ ಲಕ್ಷಣವಲ್ಲ ಮತ್ತು ಮುಖ್ಯವಾಗಿ ಜನಪ್ರತಿನಿಧಿಗಳಿಗೆ ಇದು ಶೋಭಿಸುವುದಿಲ್ಲ. ತಪ್ಪೆೆಸಗಿದವನು ವಿಷಾದ ವ್ಯಕ್ತ ಮಾಡಿದರೆ, ಇಂಥ ಘಟನೆಗಳು ಸ್ವಲ್ಪವಾದರೂ ಕಡಿಮೆ ಘೋರ ಎನಿಸುತ್ತವೆೆ ಮತ್ತು ಜನರು ಅವನ್ನು ಬೇಗ ಮರೆಯುತ್ತಾಾರೆ. ಅದರೆ, ಇವರೆಲ್ಲರೂ ತಮ್ಮ ಘನಕಾರ್ಯವನ್ನು ಸಮರ್ಥಿಸಿಕೊಳ್ಳುವುದು ದುರಂತ. ಇವರ ಬೆಂಬಲಿಗರು ಮತ್ತು ಅನುಯಾಯಿಗಳು ಕೂಡಾ ತಮ್ಮ ನಾಯಕರ ಇಂಥಹ ಘನಂದಾರಿ ಕೃತ್ಯಗಳನ್ನು ಸಮರ್ಥಿಸಿಕೊಳ್ಳುವುದು ಇನ್ನೊೊಂದು ನೈತಿಕ ದುರಂತ. ಇಂಥವರನ್ನು ಪಕ್ಷ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸದೇ ಮೌನವಾಗಿ ಇರುವುದು, ಪರೋಕ್ಷವಾಗಿ ಸಮರ್ಥಿಸಿಕೊಳ್ಳುವುದು ಅಕ್ಷಮ್ಯಅಪರಾಧ ಎನ್ನಬಹುದು.

ಯಾವ ರಾಜಕೀಯ ಪಕ್ಷವೂ ಇಂಥಹ ದುವರ್ತನೆಗಾಗಿ ತನ್ನ ಸದಸ್ಯರನ್ನು (ಪರೋಕ್ಷವಾಗಿ ಎಚ್ಚರಿಸುತ್ತವೇ ವಿನಹ) ತರಾಟೆಗೆ ತೆಗೆದುಕೊಂಡ ಉದಾಹರಣೆಗಳು ಇಲ್ಲ. ಇಂಗ್ಲೆೆಂಡ್‌ನಲ್ಲಿ ರಾಜನು ತಪ್ಪುು ಮಾಡುವುದಿಲ್ಲ *(ಓಜ್ಞಿಿಜ ಇ್ಞ ಈಟ ಘೆಟ ್ಟಟ್ಞಜ) ಕುರುಡು ನಿಷ್ಠೆೆ ಜನರಲ್ಲಿ ಇರುವಂತೆ ನಮ್ಮಲ್ಲಿ ಜನಪ್ರತಿನಿಧಿಗಳು ತಪ್ಪುು ಎಸಗುವುದಿಲ್ಲ ಎನ್ನುವ ಅಲಿಖಿತ ನಿಯಮಾವಳಿ ಇದ್ದು, ಅವರ ವಿರುದ್ಧ ಅಷ್ಟು ಸುಲಭವಾಗಿ ಪ್ರಕರಣಗಳು ದಾಖಲಾಗುವುದಿಲ್ಲ ಮತ್ತು ಅವರು ಇಂಥವುಗಳಿಂದ ನುಚಿಕೊಳ್ಳುವದರಲ್ಲಿ ಸಿದ್ಧಹಸ್ತರು ಕೂಡಾ. ಆದರೆ ಅವು ಹಾಕಿಕೊಡುವ ತಪ್ಪುು ಮಾದರಿ, ಈ ಹಾದಿ ತುಳಿಯುವಂತೆ ಬೇರೆಯವರನ್ನು ಪ್ರೇರೇಪಿಸುತ್ತದೆ. ವಿಪರ್ಯಾಸವೆಂದರೆ ಕೆಲವು ಸಂದರ್ಭದಲ್ಲಿ ಇವರ ಇಂಥ ಕುಕೃತ್ಯಗಳ ಹೊರತಾಗಿಯೂ ಕೆಲವರಿಗೆ ಉನ್ನತ ಸ್ಥಾಾನ ದೊರಕಿದೆ ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ದಿಸಲು ಟಿಕೆಟ್ ಕೂಡಾ ನೀಡಲಾಗಿದೆ..

ಪಂಚಾಯತ ಇರಬಹುದು ಅಥವಾ ಪಾರ್ಲಿಮೆಂಟ ಇರಬಹುದು, ಒಮ್ಮೆೆ ಆಯ್ಕೆೆಯಾದರೆ, ಅವರು ಬೇರೆಯವರಿಗಿಂತ ಭಿನ್ನ ಎಂದು ಭಾವಿಸುತ್ತಾಾರೆ ಮತ್ತು ತಮ್ಮನ್ನು ಬೇರೆ ರೀತಿಯಲ್ಲಿ ನಡೆಸಿಕೊಳ್ಳಬೇಕೆಂದು ನಿರೀಕ್ಷಿಿಸುತ್ತಾಾರೆ. ತಮ್ಮನ್ನು *24ಗಿ7 ವಿಐಪಿ ಯಂತೆ ಕಾಣಬೇಕು ಎನ್ನುತ್ತಾಾರೆ. ದೇಶದಲ್ಲಿ ಸಮಾಜವಾದಿ ವ್ಯವಸ್ಥೆೆಗಾಗಿ ಇಂದಿರಾಗಾಂಧಿಯವರು ರಾಜಧನವನ್ನು ರದ್ದತಿ ಮಾಡಿ ರಾಜಾತಿಥ್ಯಕ್ಕೆೆ ಇತಿಶ್ರೀ ಹಾಡಿದರು. ಹೀಗೆ ಮಾಡುವಾಗ ಮುಂದೊಮ್ಮೆೆ ‘ಜನಪ್ರತಿನಿಧಿಗಳು’ ಎನ್ನುವ ಹೊಸ ಮಹಾರಾಜರುಗಳು ಹಿಂದಿನ ಬಾಗಿಲಿನಿಂದ ಈ ರೀತಿ ದೇಶದಲ್ಲಿ ಒಕ್ಕರಿಸುತ್ತಾಾರೆ ಎಂದು ಬಹುಶಃ ಅವರು ಎಣಿಸಿರಲಿಲ್ಲವೇನೋ?

ಇಂಗ್ಲಿಿಷರ ಆಡಳಿತ ನಮ್ಮಲ್ಲಿ ಇದ್ದಾಾಗ ಕೆಲವರಿಗೆ ಏನು ತಪ್ಪುು ಮಾಡಿದರೂ ಕ್ಷಮೆ ಇದ್ದು ಅದನ್ನು ‘ಬಾರಾಖೂನ್ ಮಾಫ್ ಮಹನೀಯರು’ ಎನ್ನುತ್ತಿಿದ್ದರಂತೆ. ಈಗ ನಮ್ಮ ಕೆಲವು ಜನಪ್ರತಿನಿಧಿಗಳು ಕೂಡಾ ಇದನ್ನು ಅನುಭವಿಸುತ್ತಿಿರುವಂತೆ ಕಾಣುತ್ತದೆ.
ಜನಪ್ರತಿನಿಧಿಗಳಿಗೆ ನೀಡುವ ಸೌಲಭ್ಯ ಮತ್ತು ವಿನಾಯಿತಿಗಳ ಬಗೆಗೆ ಜನಸಾಮಾನ್ಯರಲ್ಲಿ ಸಾಕಷ್ಟು ಆಕ್ರೋೋಶ ಇದೆ. ಈಗ ಗಾಯ ಕ್ಕೆೆ ಉಪ್ಪುು ಸವರಿದಂತೆ ಅವರ ಅನಿಯಂತ್ರಿಿತ ದುರ್ನಡತೆ ಮತ್ತು ಉಡಾಫೆ ಕೂಡಾ ಇದಕ್ಕೆೆ ಜೊತೆಯಾಗಿದೆ. ನಮ್ಮ ಕಾನೂನು ವ್ಯವಸ್ಥೆೆಯಲ್ಲಿರುವ ಕೆಲ ನ್ಯೂನತೆಗಳನ್ನು ಜನಪ್ರತಿನಿಧಿಗಳು ದುರುಪಯೋಗ ಮಾಡಿಕೊಂಡು ಕಾನೂನಿನ ಕುಣಿಕೆಯಿಂದ ತಪ್ಪಿಿಸಿಕೊಳ್ಳುತ್ತಾಾರೆ. ಕೆಲ ಜನಪ್ರತಿನಿಧಿಗಳ ಸಾಧನೆ ಶೂನ್ಯ ಇದ್ದರೂ ಜನರು ಕ್ಷಮಿಸುತ್ತಾಾರೆ ಮತ್ತು ಮುಂದಿನ ಚುನಾವಣೆಯಲ್ಲಿ ಪುನಹ ಆರಿಸಿ ಕಳಿಸುತ್ತಾಾರೆ.

ಇತ್ತೀಚೆಗೆ ನಿಧನರಾದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾಾ ಸ್ವರಾಜ್‌ರನ್ನು ಜನ ನೆನಪಿನಲ್ಲಿ ಇಟ್ಟುಕೊಂಡಿದ್ದರೆೆ ಅದಕ್ಕೆೆ ಮುಖ್ಯಕಾರಣ ಅವರು ಜನಸಾಮಾನ್ಯರಿಗೆ ಸ್ಪಂದಿಸಿದ್ದರು ಮತ್ತು ಅವರೊಂದಿಗೆ ಕಾಣಿಸಿಕೊಂಡಿದ್ದರು ಎಂಬುದು. ವಿದೇಶದಲ್ಲಿ ಸಿಲುಕಿ ಬಿದ್ದ ಅಮಾಯಕರನ್ನು ತಾಯ್ನಾಾಡಿಗೆ ಕರೆತಂದ ಅವರ ಪ್ರಯತ್ನ ಶ್ಲಾಾಘನೀಯವಾಗಿದ್ದು, ಜನತೆ ನಮ್ಮ ಜನ ಪ್ರತಿನಿಧಿಗಳಲ್ಲಿ ಇಂಥ ಜನಸ್ನೇಹಿ ಪೃವೃತ್ತಿಿಯನ್ನು ನೋಡಲು ಇಚ್ಛಿಿಸುತ್ತಾಾರೆ.