Friday, 24th September 2021

ದಣಿವರಿಯದೆ ದುಡಿಯುವ ‘ರಾಜಾಹುಲಿ’

ಪಿಎಂ ‘ಪಾಲಿಸಿ’ದ ಸಿಎಂ ಬಿಎಸ್‌ವೈ ಪ್ರತಿನಿತ್ಯ 14-16 ಗಂಟೆ ಕಾರ್ಯನಿರ್ವಹಣೆ

‘ಸಾಧನೆ ಮಾತಾಗಬೇಕೆ ಹೊರತು, ಮಾತೇ ಸಾಧನೆಯಾಗಬಾರದು’ ಎನ್ನುತ್ತಲೇ ಅಧಿಕಾರದ ಚುಕ್ಕಾಾಣಿ ಹಿಡಿದ ಮುಖ್ಯಮಂತ್ರಿಿ ಬಿ. ಎಸ್.ಯಡಿಯೂರಪ್ಪ ಅವರು ಇದೀಗ ಅದೇ ರೀತಿ ನಡೆದುಕೊಳ್ಳುತ್ತಿಿದ್ದು, 76ನೇ ವಯಸ್ಸಿಿನಲ್ಲೂ ಫುಲ್ ಆಕ್ಟೀವ್ ಆಗಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದೆ.

ಜು.26ರಂದು ಮುಖ್ಯಮಂತ್ರಿಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಸದಾ ಒಂದಿಲ್ಲೊೊಂದು ಸಭೆ, ಕಾರ್ಯಕ್ರಮ, ನಿಯೋಗ ಭೇಟಿ ಹಾಗೂ ಪ್ರವಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಯಡಿಯೂರಪ್ಪ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನುಸರಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ವಾರಾಂತ್ಯವನ್ನೂ ಲೆಕ್ಕಿಿಸದೆ ಪ್ರತಿನಿತ್ಯ 14-16 ಗಂಟೆ ಕಾರ್ಯ ನಿರ್ವಹಿಸುತ್ತಿಿದ್ದಾರೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಿಯಾದ ದಿನದಿಂದಲೂ, ಬೆ.9 ರಿಂದ ರಾತ್ರಿಿ 9ಗಂಟೆವರೆಗೆ ವಿವಿಧ ಕಾರ್ಯಕ್ರಮವನ್ನು ಹಾಕಿಕೊಂಡಿರುವುದು ವೇಳಾಪಟ್ಟಿಿಯಲ್ಲಿ ಕಾಣಬಹುದಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಈ ರೀತಿ ವಿವಿಧ ಸಭೆ ಹಾಗೂ ನಿಯೋಗಗಳ ಭೇಟಿಯನ್ನು ಬಹುತೇಕ ಮುಖ್ಯಮಂತ್ರಿಿಗಳು ಮಾಡುತ್ತಾರೆ. ಆದರೆ ಯಡಿಯೂರಪ್ಪ ಅವರು ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿಯೂ ಇದನ್ನು ಮುಂದುವರಿಸಿದ್ದಾರೆ.

ಮೋದಿ ಮಾದರಿ ಪಾಲನೆ
ಆರು ವರ್ಷಗಳಿಂದ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿಿರುವ ನರೇಂದ್ರ ಮೋದಿ, ಅಂದಿನಿಂದ ಇಲ್ಲಿಯವರೆಗೆ ಯಾವುದೇ ರಜೆಗಳನ್ನು ತೆಗೆದುಕೊಳ್ಳದೆ ಕಾರ್ಯನಿರ್ವಹಿಸುತ್ತಿಿದ್ದಾಾರೆ. ಅದೇ ರೀತಿ ಯಡಿಯೂರಪ್ಪ ಅವರು ಫುಲ್ ಆಕ್ಟೀವ್ ಆಗಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದಾಾರೆ. ಪ್ರತಿನಿತ್ಯ ತಮ್ಮನ್ನು ರಾಜ್ಯದ ವಿವಿಧ ಅಭಿವೃದ್ಧಿಿ ವಿಚಾರ ಅಥವಾ ಇಲಾಖೆಗೆ ಸಂಬಂಧಿಸಿದ ಸಭೆಗಳಲ್ಲಿ ತೊಡಗಿಸಿಕೊಂಡಿದ್ದಾಾರೆ.

ಮುಖ್ಯಮಂತ್ರಿಿಯಾಗಿ ಅಧಿಕಾರ ಸ್ವೀಕರಿಸಿ 45 ದಿನಗಳು ಕಳೆಯುತ್ತಾಾ ಬಂದರೂ, ರಜಾದಿನಗಳೂ ಸೇರಿದಂತೆ ಸಿಎಂ ವೇಳಾಪಟ್ಟಿಿ ಒಂದೇ ಸಮನಾಗಿದೆ. ಪ್ರತಿನಿತ್ಯ ವಿವಿಧ ಸಮುದಾಯದ ನಿಯೋಗದೊಂದಿಗೆ ಸಭೆ, ಇಲಾಖಾವಾರು ಅಧಿಕಾರಿಗಳ ಸಭೆ, ಸಾರ್ವಜನಿಕರ ಕುಂದುಕೊರತೆ ಹಾಗೂ ರಾಜ್ಯದಲ್ಲಿ ಸಂಭವಿಸಿರುವ ನೆರೆ ಪ್ರದೇಶಗಳಿಗೆ ಸಂಬಂಧಿಸಿದ ಭೇಟಿಯ ಮಾಹಿತಿಯಿದೆ. ಇದರಿಂದ ಕಾರ್ಯಾಂಗ ಹಾಗೂ ಶಾಸಕಾಂಗ ಅವರೊಂದಿಗೆ ಸಾಗಲೇ ಬೇಕಾಗಿದೆ.

ಈ ಹಿಂದೆ ಕುಮಾರಸ್ವಾಾಮಿ ಅವರು ಮುಖ್ಯಮಂತ್ರಿಿಯಾಗಿದ್ದಾಾಗ, ವೇಳಾಪಟ್ಟಿಿ ಮೂರರಿಂದ ನಾಲ್ಕು ಕಾರ್ಯಕ್ರಮಕ್ಕೆೆ ಸೀಮಿತವಾಗಿರುತ್ತಿಿತ್ತು. ಅದರಲ್ಲಿ ಕೆಲವು ಕೃಷ್ಣಾಾದಲ್ಲಿ ಹಾಗೂ ಇನ್ನು ಕೆಲ ಸಭೆಗಳನ್ನು ಖಾಸಗಿ ನಿವಾಸದಲ್ಲಿ ನಡೆಸುತ್ತಿಿದ್ದರು. ಆದರೆ ಯಡಿಯೂರಪ್ಪ ಅವರು ತಮ್ಮ ಬಹುತೇಕ ಸಭೆಗಳನ್ನು ವಿಧಾನಸೌಧ ಅಥವಾ ಗೃಹಕಚೇರಿ ಕೃಷ್ಣದಲ್ಲಿ ನಡೆಸುತ್ತಿಿದ್ದಾಾರೆ. ವಿಧಾನಸೌಧದಲ್ಲಿ ಈ ರೀತಿ ಹೆಚ್ಚು ಸಭೆಗಳನ್ನು ನಡೆಸುವುದರಿಂದ ಇತರ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ವಿಧಾನಸೌಧದಲ್ಲಿ ಇರಲೇಬೇಕಾಗಿದೆ.

ವಾರಾಂತ್ಯದಲ್ಲೂ ಆಕ್ಟೀವ್
ಭಾನುವಾರದಂದು ಮುಖ್ಯಮಂತ್ರಿಿಗಳಿಂದ ಹಿಡಿದು ಸಚಿವರು ಹಾಗೂ ಸರಕಾರಿ ಅಧಿಕಾರಿಗಳು ರಜೆ ಮೂಡ್‌ನಲ್ಲಿರುತ್ತಾಾರೆ. ಸಚಿವರು ಹಾಗೂ ಸಿಎಂ ತಮ್ಮ ವೇಳಾಪಟ್ಟಿಿಯಲ್ಲಿ ‘ಕಾಯ್ದಿಿರಿಸಲಾಗಿದೆ’ ಎಂದಷ್ಟೇ ಹೇಳಿ, ಕುಟುಂಬ ಸದಸ್ಯರೊಂದಿಗೆ ಅಥವಾ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸಹಜ. ಆದರೆ ಇದಕ್ಕೆೆ ತದ್ವಿಿರುದ್ಧ ಎನ್ನುವ ರೀತಿಯಲ್ಲಿ ಮುಖ್ಯಮಂತ್ರಿಿ ಯಡಿಯೂರಪ್ಪ ಅವರು ಇದೀಗ ಕಾರ್ಯನಿರ್ವಹಿಸುತ್ತಿಿದ್ದು, ಜು.26ರಿಂದ ಇಲ್ಲಿಯವರೆಗೆ ಕೇವಲ ಒಂದು ಭಾನುವಾರವನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ದಿನಗಳಲ್ಲಿಯೂ ಅಧಿಕೃತ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ.

ಭಾನುವಾರದ ವೇಳಾಪಟ್ಟಿ
ಆ.4- ಗೃಹ ಕಚೇರಿ ಕೃಷ್ಣಾಾದಲ್ಲಿ ಸಾರ್ವಜನಿಕರಿಂದ ದೂರು ಸ್ವೀಕಾರ.
ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ
ಆ.11 – ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ.
ಆ.18- ನೆರೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಸಭೆ. ಸುದ್ದಿಗೋಷ್ಠಿಿ
ಆ.25 – ಖಾತೆ ಹಂಚಿಕೆ ಸಂಬಂಧ ದೆಹಲಿಯಲ್ಲಿ ವರಿಷ್ಠರೊಂದಿಗೆ ಸಭೆ
ಸೆ.1 – ಗಣೇಶ ಹಬ್ಬದ ಪ್ರಯುಕ್ತ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಿಲ್ಲ.
ಸೆ. 8 – ಬೆಂಗಳೂರು ನಗರ ಪ್ರದಕ್ಷಿಿಣೆ.
ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿ.

Leave a Reply

Your email address will not be published. Required fields are marked *