Wednesday, 1st December 2021

ನೆರೆ ಪರಿಹಾರದ ಖುದ್ದು ಪರಿಶೀಲನೆ

ಬಡವರಿಗೆ ಮಾತ್ರ ಮನೆ ಮಂಜೂರುಗೊಳಿಸುವಲ್ಲಿ ಮುತುವರ್ಜಿ ವಹಿಸಬೇಕು: ನ್ಯಾಾ.ವಿಶ್ವನಾಥ ಶೆಟ್ಟಿಿ
ವಿಶ್ವವಾಣಿ ಸುದ್ದಿಮನೆ ಉಡುಪಿ
ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಪ್ರಾಾಕೃತಿಕ ವಿಕೋಪಗಳಿಂದ ಹೆಚ್ಚಿಿನ ಪ್ರಮಾಣದಲ್ಲಿ ಮನೆ ಹಾನಿಗೀಡಾದ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ದೊರೆತಿರುವ ಬಗ್ಗೆೆ ಲೋಕಾಯುಕ್ತ ಅಧಿಕಾರಿಗಳಿಂದ ಖುದ್ದು ಪರಿಶೀಲನೆ ನಡೆಸಲಾಗುವುದು ಎಂದು ಲೋಕಾಯುಕ್ತ ನ್ಯಾಾ.ಪಿ. ವಿಶ್ವನಾಥ ಶೆಟ್ಟಿಿ ತಿಳಿಸಿದರು.
ಜಿಲ್ಲಾಾಧಿಕಾರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಕಂದಾಯ ಇಲಾಖೆಯಿಂದ ಪ್ರಾಾಕೃತಿಕ ವಿಕೋಪ ಸಂತ್ರಸ್ತರ ಪಟ್ಟಿಿ ಪಡೆದು, ಲೋಕಾಯುಕ್ತ ಇನೆಸ್ಪಕ್ಟರ್‌ಗಳು ಖುದ್ದಾಾಗಿ ಸಂತ್ರಸ್ತರ ಮನೆಗೆ ಭೇಟಿ ನೀಡಿ, ಪರಿಹಾರ ಮೊತ್ತ ದೊರಕಿರುವ ಬಗ್ಗೆೆ ಪರಿಶೀಲನೆ ನಡೆಸಲಿದ್ದಾಾರೆ ಎಂದರು.
ವಸತಿ ನಿಲಯಕ್ಕೆೆ ಭೇಟಿ: ವಿಶ್ವನಾಥ್ ಶೆಟ್ಟಿಿ ಕುಂಜಿಬೆಟ್ಟುವಿನಲ್ಲಿರುವ ಸಮಾಜ ಕಲ್ಯಾಾಣ ಇಲಾಖೆಯ ಮೆಟ್ರಿಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಸತಿ ನಿಲಯ ಹಳೆಯದಾಗಿದ್ದು, ಹೊಸ ಕಟ್ಟಡ ನಿರ್ಮಿಸುವ ಬಗ್ಗೆೆ ಅಧಿಕಾರಿಗಳಲ್ಲಿ ವಿಚಾರಿಸಿದರು. ವಸತಿ ನಿಲಯದ ಜಾಗ ಭೂ ವಿವಾದದಲ್ಲಿ ಇರುವುದರಿಂದ ನೂತನ ಕಟ್ಟಡ ನಿರ್ಮಿಸಲು ಅಡ್ಡಿಿಯಾಗಿರುವ ತಾಂತ್ರಿಿಕ ಸಮಸ್ಯೆೆಗಳನ್ನು ಸಮಾಜ ಕಲ್ಯಾಾಣ ಇಲಾಖೆ ಪ್ರಭಾರ ಉಪ ನಿರ್ದೇಶಕ ರಮೇಶ್ ಲೋಕಾಯುಕ್ತರಿಗೆ ವಿವರಿಸಿದರು.

ತಾರತಮ್ಯ ಬೇಡ
ವಸತಿ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾಗುವಂತೆ ಗಮನ ಹರಿಸಬೇಕು. ಹಲವೆಡೆ ಗ್ರಾಾಪಂ ಅಧ್ಯಕ್ಷರು, ಅನರ್ಹರಿಗೂ ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಲು ಪಿಡಿಒಗಳ ಮೇಲೆ ಒತ್ತಡ ಹೇರಿರುವ ಬಗ್ಗೆೆ ದೂರುಗಳು ಬಂದಿವೆ. ಅಮೆರಿಕ ದೇಶದಲ್ಲಿ ಉದ್ಯೋೋಗದಲ್ಲಿರುವವರಿಗೂ ವಸತಿ ಯೋಜನೆಯ ಮನೆ ಮಂಜೂರಾಗಿರುವ ಪ್ರಕರಣಗಳು ಇವೆ. ಈ ನಿಟ್ಟಿಿನಲ್ಲಿ ಬಡವರಿಗೆ ಮಾತ್ರ ಮನೆ ಮಂಜೂರುಗೊಳಿಸುವಲ್ಲಿ ಮುತುವರ್ಜಿ ವಹಿಸಬೇಕು ಎಂದರು.

ಮಧ್ಯವರ್ತಿಗಳನ್ನು ದೂರವಿಡಿ
ಆರ್‌ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಸಾರ್ವಜನಿಕರ ಸೇವೆಗಳಿಗೆ ಹೆಚ್ಚು ಖರ್ಚು ಮಾಡಬೇಕಾಗುತ್ತಿಿದೆ ಎಂದು ವ್ಯಾಾಪಕ ದೂರುಗಳು ಬರುತ್ತಿಿವೆ. ಈ ನಿಟ್ಟಿಿನಲ್ಲಿ ಬ್ರೋೋಕಗರ್‌ಳನ್ನು ಆರ್‌ಟಿಒ ಕಚೇರಿಯಿಂದ ದೂರವಿಡುವಂತೆ ಆರ್‌ಟಿಒ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಾಯಮೂರ್ತಿಗಳು ಸೂಚಿಸಿದರು. ಇದಲ್ಲದೇ ಅನುಮತಿ ಪಡೆದಿರುವ ಖಾಸಗಿ ಬಸ್‌ಗಳು ನಿಗದಿತ ಮಾರ್ಗದಲ್ಲಿ ಸಂಚರಿಸುತ್ತಿಿರುವ ಬಗ್ಗೆೆ ನಿಗಾ ವಹಿಸಬೇಕು ಎಂದರು.

ಕೃಷಿ ಇಲಾಖೆಗೆ ಸೂಚನೆ
ಕೃಷಿ ಇಲಾಖೆಯ ಕೃಷಿ ಹೊಂಡ ಯೋಜನೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿಯಾಗಿರುವುದಿಲ್ಲ. ಈ ನಿಟ್ಟಿಿನಲ್ಲಿ ಕೃಷಿಕರಿಗೆ ಇದರ ಬಗ್ಗೆೆ ಅರಿವು ಮೂಡಿಸಿ, ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.