Thursday, 16th September 2021

ಬೆಂಕಿಗೆ ತುಪ್ಪ ಸುರಿಯುವುದೇ ಬಿಜೆಪಿ ಕೆಲಸ: ಸಿದ್ದು

ಐಟಿ, ಇ.ಡಿ ಕೇಂದ್ರ ಅಧೀನ ಸಂಸ್ಥೆೆಗಳೆಂಬ ಕನಿಷ್ಠ ಜ್ಞಾನವೂ ಕಟೀಲ್‌ಗೆ ಇಲ್ಲ

ಸಿದ್ದರಾಮಯ್ಯ ಅವರಿಂದಲೇ ಡಿ.ಕೆ.ಶಿವಕುಮಾರ್ ಜೈಲು ಸೇರಿದ್ದಾರೆ ಎಂಬ ಬಿಜೆಪಿ ರಾಜ್ಯಾಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆರೋಪಕ್ಕೆೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿಿ ಸಿದ್ದರಾಮಯ್ಯ, ಐಟಿ, ಜಾರಿ ನಿರ್ದೇಶನಾಲಯ(ಇ.ಡಿ) ಕೇಂದ್ರೀಯ ಸಂಸ್ಥೆೆಗಳೆಂಬ ಕನಿಷ್ಠ ಜ್ಞಾನವೂ ಕಟೀಲ್‌ಗೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಿ ನಡೆಸಿ, ಕಟೀಲು ದುರುದ್ದೇಶದಿಂದ ಹೀಗೆ ಹೇಳಿದ್ದಾರೆ. ಐಟಿ, ಇ.ಡಿ ಯಾರ ಅಧೀನದಲ್ಲಿದೆ ಅನ್ನೋೋದು ಅವರಿಗೆ ಗೊತ್ತಿಿಲ್ಲ. ಇವೆಲ್ಲ ಕೇಂದ್ರ ಸರಕಾರದ ಅಧೀನದಲ್ಲಿವೆ. ಹುಳಿ ಹಿಂಡುವುದು, ಬೆಂಕಿ ಹಚ್ಚೋೋದು ಬಿಜೆಪಿಯವರ ಕೆಲಸವಾಗಿದೆ. ಬಿಜೆಪಿಯವರು ಕನಿಷ್ಠ ಜ್ಞಾಾನ ಇಲ್ಲದ ಕಟೀಲ್‌ರನ್ನು ರಾಜ್ಯಾಾಧ್ಯಕ್ಷರನ್ನಾಾಗಿ ಏಕೆ ಮಾಡಿದರೋ ಗೊತ್ತಿಿಲ್ಲ ಎಂದರು.

ಯಡಿಯೂರಪ್ಪ ಬಂದ ಮೇಲೆ ವರ್ಗಾವಣೆ ದಂಧೆ, ದ್ವೇಷದ ರಾಜಕಾರಣ ಇಷ್ಟೇ ಅವರ ಕೆಲಸವಾಗಿದೆ. ಪ್ರವಾಹದಿಂದ ಸಾವಿರಾರು ಜನ ಸಂಕಷ್ಟ ಅನುಭವಿಸುತ್ತಿಿದ್ದಾರೆ. ಅವರಿಗೆ ಯಾವ ಪರಿಹಾರವನ್ನೂ ಕೊಟ್ಟಿಿಲ್ಲ. ಅವರ ಬಗ್ಗೆೆ ಸರಕಾರಕ್ಕೆೆ ಕಾಳಜಿಯಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಉಪಚುನಾವಣೆಗೆ ತಯಾರಿ.

ವಿಧಾನಸಭೆ ಉಪಚುನಾವಣೆ ಎದುರಾಗುತ್ತಿಿರುವ ಹಿನ್ನೆೆಲೆಯಲ್ಲಿ ಪಕ್ಷ ಸಂಘಟನೆಗೆ ಕಾಂಗ್ರೆೆಸ್ ಹೆಚ್ಚು ಒತ್ತು ನೀಡಿದೆ. ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣು ಇಟ್ಟಿಿರುವ ಕಾಂಗ್ರೆೆಸ್ ಸೋಮವಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಆ ಸಮುದಾಯವಾರು ಮುಖಂಡರ ಸಭೆಯನ್ನು ಕೆಪಿಸಿಸಿ ಕಚೇರಿಯಲ್ಲಿ ನಡೆಸಿತು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆೆ, ಹಿಂದುಳಿದ ಘಟಕಗಳ ವಿಭಾಗ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ ಪಾಲ್ಗೊೊಂಡಿದ್ದರು.

ಸಭೆ ನಂತರ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಒಲ್ಲದ ಶಿಶುವಾಗಿದ್ದಾರೆ. ಅಕ್ರಮವಾಗಿ ಸರಕಾರ ರಚನೆ ಮಾಡಿದ್ದಾರೆ. ಧಮ್ಕಿಿ ಹಾಕಿ ಯಡಿಯೂರಪ್ಪ ಮುಖ್ಯಮಂತ್ರಿಿಯಾಗಿದ್ದಾರೆ. ಬಿಜೆಪಿಯವರಿಗೂ ಯಡಿಯೂರಪ್ಪ ಮುಖ್ಯಮಂತ್ರಿಿ ಮಾಡೋ ಮನಸ್ಸಿಿರಲಿಲ್ಲ. ಹಾಲು ಕುಡಿದ ಮಕ್ಕಳೇ ಬದುಕಲ್ಲ. ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ? ಎಂದು ಯಡಿಯೂರಪ್ಪ ಹಾಗೂ ಅವರ ಸರಕಾರದ ಬಗ್ಗೆೆ ವ್ಯಂಗ್ಯ ಮಾಡಿದರು.

ನಾವು ಪ್ರಚಾರ ಕಾರ್ಯದಲ್ಲಿ ವಿಫಲ
ಕಾಂಗ್ರೆೆಸ್ ಮುಂದೆ ಸಾಕಷ್ಟು ಸವಾಲುಗಳಿವೆ. ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದೇವೆ. ವಿಧಾನಸಭೆ ಚುನಾವಣೆಯಲ್ಲಿ ನಮಗೆ 80 ಸೀಟು, ಬಿಜೆಪಿಗೆ 104 ಸೀಟು ಬಂದಿದ್ದರೂ, ಶೇಕಡಾವಾರು ಮತ ನಮಗೆ ಜಾಸ್ತಿಿ ಬಂದಿವೆ. ನಾವು ಪ್ರಚಾರ ಕಾರ್ಯದಲ್ಲಿ ವಿಫಲರಾಗಿದ್ದರಿಂದ ಸೀಟು ಕಡಿಮೆ ಬಂದಿವೆ. ಅಲ್ಲದೆ, ಇವಿಎಂಗಳ ದುರುಪಯೋಗವೂ ಆಗಿದೆ.
ಆದರೂ ಸೋಲನ್ನ ಒಪ್ಪಿಿಕೊಂಡಿದ್ದೇವೆ. ಜತೆಗೆ ಯಾವ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆೆಲೆಯಲ್ಲಿ ಜೆಡಿಎಸ್ ಹಾಗೂ ನಾವು ಸೇರಿ ಸಮ್ಮಿಿಶ್ರ ಸರಕಾರ ಮಾಡಿದ್ದೆವು. ಕುಮಾರಸ್ವಾಾಮಿ ಮುಖ್ಯಮಂತ್ರಿಿಯಾದರು. ಆದರೆ, ಬಿಜೆಪಿಯವರು ಜೆಡಿಎಸ್-ಕಾಂಗ್ರೆೆಸ್ ಸೇರಿ 17 ಶಾಸಕರ ರಾಜೀನಾಮೆ ಕೊಡಿಸಿದರು. ಶಾಸಕರ ರಾಜೀನಾಮೆ ಕಾನೂನು ಬಾಹಿರವಾಗಿದೆ. ಯಡಿಯೂರಪ್ಪ 17 ಅನರ್ಹ ಶಾಸಕರ ಕ್ಷೇತ್ರಗಳಿಗೆ ಬರಪೂರ ಅನುದಾನ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಬರಿ ಬಿಜೆಪಿ ಶಾಸಕರಿಗಷ್ಟೇ ಯಡಿಯೂರಪ್ಪ ಮುಖ್ಯಮಂತ್ರಿಿಯಾಗಿದ್ದಾರೆ. ಇಡೀ ರಾಜ್ಯಕ್ಕೆೆ ಅಲ್ಲ. ಈ ರೀತಿಯ ದ್ವೇಷದ ರಾಜಕಾರಣ ಹೆಚ್ಚು ದಿನ ಯಶಸ್ವಿಿಯಾಗುವುದಿಲ್ಲ ಎಂದು ಭವಿಷ್ಯ ನುಡಿದರು.

17 ವಿಧಾನಸಭಾ ಕ್ಷೇತ್ರಗಳಲ್ಲಿ 14 ಕಾಂಗ್ರೆೆಸ್ ಶಾಸಕರಿದ್ದ ಮತ್ತು ಮೂವರು ಜೆಡಿಎಸ್ ಶಾಸಕರಿದ್ದ ಕ್ಷೇತ್ರಗಳಾಗಿವೆ. 17 ಕ್ಷೇತ್ರಗಳಲ್ಲೂ ಉಪಚುನಾವಣೆ ಎದುರಿಸುತ್ತೇವೆ. ಸಿದ್ದರಾಮಯ್ಯ ನೀಡಿದ ಸಾಲಭಾಗ್ಯ ಎಲ್ಲರಿಗೂ ಅನುಕೂಲವಾಯ್ತು. ಅದರ ಬಳಿಕ ಆದ ಘಟನೆಗಳ ಬಗ್ಗೆೆ ಚರ್ಚೆ ಮಾಡುವುದು ಬೇಡ. ಅದನ್ನು ಬೇರೆ ರೀತಿ ವ್ಯಾಾಖ್ಯಾಾನ ಮಾಡುತ್ತಾಾರೆ. ಉಪಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿಿ ಮಾಡಿಕೊಳ್ಳುವುದಿಲ್ಲ.
ಈಶ್ವರ್ ಖಂಡ್ರೆೆ ಕೆಪಿಸಿಸಿ ಕಾರ್ಯಾಧ್ಯಕ್ಷ

Leave a Reply

Your email address will not be published. Required fields are marked *