Wednesday, 18th September 2024

ಕುಪ್ಪಂ ಕ್ಷೇತ್ರ: ಚಂದ್ರಬಾಬು ನಾಯ್ಡುಗೆ ಮುನ್ನಡೆ

ಆಂಧ್ರಪ್ರದೇಶ: ಕುಪ್ಪಂ ಕ್ಷೇತ್ರದಲ್ಲಿ ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು ಮುನ್ನಡೆ ಸಾಧಿಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಟಿಡಿಪಿ 12 ಮತ್ತು ಜನಸೇನಾ 2 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಪಡೆದಿವೆ.

ಆಂಧ್ರ ಪ್ರದೇಶ ವಿಧಾನಸಭೆ ಚುನಾವನೆಯ ಫಲಿತಾಂಶವೂ ಇಂದು ಹೊರಬೀಳಲಿದೆ. ರಾಜ್ಯದ 175 ಕ್ಷೇತ್ರಗಳಿಗೆ ಮೇ 13ರಂದು ಲೋಕಸಭೆ ಚುನಾವನೆ ಜೊತೆ ಜೊತೆಗೆ ಮತದಾನ ನಡೆದಿತ್ತು.

ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ಸಿಪಿ ವರಿಷ್ಠ ವೈ.ಎಸ್. ಜಗನ್ ಮೋಹನ ರೆಡ್ಡಿ, ಟಿಡಿಪಿ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ವರಿಷ್ಠ ಪಪವನ್ ಕಲ್ಯಾಣ್ ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ. ಇಲ್ಲಿಯೂ ಸಹ ಅತಂತ್ರ ವಿಧಾನಸಭೆಯ ಭವಿಷ್ಯವನ್ನು ಕೆಲ ಮತಗಟ್ಟೆ ಸಮೀಕ್ಷೆಗಳು ನುಡಿದಿವೆ.

ವೈಎಸ್‌ಆರ್‌ಸಿಪಿಯು 175 ಕ್ಷೇತ್ರಗಳಲ್ಲಿ ಟಿಡಿಪಿ 144, ಜನಸೇನಾ 21 ಮತ್ತು ಬಿಜೆಪಿ 10 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ.

Leave a Reply

Your email address will not be published. Required fields are marked *