ವಿಶ್ವವಾಣಿ ಸುದ್ದಿಮನೆ
ವಿಜಯಪುರ :
ಆರಂಭದಿಂದ ಇಲ್ಲಿಯ ವರೆಗೆ ಕರೋನಾ ಮುಕ್ತವಾಗಿದ್ದ ವಿಜಯಪುರ ನಗರಕ್ಕೆ ಇಂದು ಕಿಲ್ಲರ್ ಕರೋನಾ ವೈರಸ್ ಲಗ್ಗೆ ಇಟ್ಟಿದ್ದು, ಮಹಾಮಾರಿ ವೈರಸ್ ಸೊಂಕು ನಗರದ ಒರ್ವ ವೃದ್ದೆಗೆ ತಗುಲಿದ್ದು ಪರಿಣಾಮ ಇಲ್ಲಿನ ಗಲ್ಲಿಯೊಂದನ್ನು ಜಿಲ್ಲಾಧಿಕಾರಿಗಳು ಶೀಲ್ ಡೌನ್ ಮಾಡಿದ್ದಾರೆ.
ಇಲ್ಲಿನ ಐತಿಹಾಸಿಕ ಗೋಳಗುಮ್ಮಟದ ಸಮೀಪದ ಚಪ್ಪರಬಂದ್ ಗಲ್ಲಿಯಲ್ಲಿ ವಾಸವಾಗಿದ್ದ ೬೦ ರ ವೃದ್ದೆಯಲ್ಲಿ ಸೊಂಕು ಧೃಡಪಟ್ಟ ಕಾರಣ ಈ ವೃದ್ದೆಯನ್ನು ಈಗ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಇಡೀ ಅಸ್ಪತ್ರೆಯನ್ನು ಕೋವಿಡ್ ೧೯ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿನ ಇತರೆ ರೋಗಿಗಳನ್ನು ವಿವಿಧ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ಹಿನ್ನಲೆಯಲ್ಲಿ ಲಾಕ್ ಡೌನ್ ದಿಂದ ಸ್ಥಬ್ದವಾಗಿದ್ದ ನಗರ ಈಗ ಸಂಪೂರ್ಣ ಸ್ಥಬ್ದವಾಗಿದೆ. ಶೀಲ್ ಡೌನ್ ಇರುವ ಗಲ್ಲಿಯ ನಿವಾಸಿಗಳಿಗೆ ಪಾಲಿಕೆಯ ವತಿಯಿಂದ ಅಗತ್ಯವಸ್ತು ಪೂರೈಸುವದಾಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.