Wednesday, 5th August 2020

ವೈದ್ಯ ಸೇರಿ ನಾಲ್ವರ ಅಮಾನತು

 

ವಿಶ್ವವಾಣಿ ಸುದ್ದಿಮನೆ
ವಿಜಯಪುರ : ಹಾವು ಕಚ್ಚಿದ ಪರಿಣಾ ಗಂಭೀರ ಗಾಯಗೊಂಡ ಯುವಕನಿಗೆ ಸಕಾಲಕ್ಕೆ ಚಿಕಿತ್ಸೆ ನೀಡದೆ ನಿರ್ಲಕ್ಷ ತೋರಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಸೇರಿದಂತೆ ನಾಲ್ವರು ಸಿಬ್ಬಂದಿ ಅಮಾನತುಗೊಂಡ ಘಟನೆ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಡಾ. ರುಕ್ಸಾನಾ ಬೇಗಂ, ನರ್ಸ ಲಕ್ಷ್ಮಿ ಪಾಟೀಲ, ಫಾರ್ಮಸಿ ಅಧಿಕಾರಿ ಎನ್. ಬಿ. ಪಾಟೀಲ ಹಾಗೂ ಡಿ ದರ್ಜೆ ನೌಕರ ಮಡಿವಾಳ ಅಖಂಡಳ್ಳಿ ಎಂಬುವರನ್ನು ಅಮಾನತು ಮಾಡಲಾಗಿದ ಎಂದು ಡಿ.ಎಚ್.ಓ. ಮಹೇಂದ್ರ ಕಾಪ್ಸೆ ತಿಳಿಸಿದ್ದಾರೆ.
ಸಿಂದಗಿ ತಾಲ್ಲೂಕಿನ ತಿಳಗುಳ ಗ್ರಾಮದ ಕಾಳಪ್ಪ ದೊಡಮನಿ ( ೨೦) ಎಂಬ ಯುವಕನಿಗೆ ಆಕಸ್ಮಿಕವಾಗಿ ಹಾವು ಕಚ್ಚಿದಾಗ, ತುರ್ತು ಚಿಕಿತ್ಸೆಗಾಗಿ ಕಲಕೇರಿಯ ಪ್ರಾಥಮಿಕ ಆತೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು.

ಈ ವೇಳೆ ಆಸ್ಪತ್ರೆಯ ವೈದ್ಯರು ಸಕಲಕ್ಕೆ ಚಿಕಿತ್ಸೆ ನೀಡದ ಕಾರಣ ಯುವಕ ಕಾಳಪ್ಪ ಮೃತಪಟ್ಟಿದ್ದಾನೆ.

ಇದರಿಂದ ಆಕ್ರೋಶಗೊಂಡ ಯುವಕನ ಪಾಲಕರು ಆಸ್ಪತ್ರೆ ಗೇಟ್ ಎದುರು ಶವವನ್ನು ಇಟ್ಟು ಪ್ರತಿಭಟನೆ ನಡೆಸಿ, ಯುವಕನ ಸಾವಿಗೆ ವೈದ್ಯರ ನಿರ್ಲಕ್ಷವೇ ಎಂದು ಕಾರಣ ಎಂದು ದೂರಿದ್ದಾರೆ. ಈ ಮಾಹಿತಿ ಮಾದ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಡಿ.ಎಚ್.ಓ. ಈ ಆದೇಶ ಹೊರಡಿಸಿರುವದಾಗಿ ಪ್ರಕಟಣೆಯಲ್ಲಿ ತಿಳಿದಿದ್ದಾರೆ.

Leave a Reply

Your email address will not be published. Required fields are marked *