ಶಿರಸಿ :
ಶಿರಸಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಸೋಮವಾರ 23 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಸೋಂಕಿತರ ಸಂಖ್ಯೆ 113 ಕ್ಕೆ ಏರಿದ್ದು, ಒಂದು ಸಾವು ಸೇರಿ ಒಟ್ಟೂ 114 ಪ್ರಕರಣಗಳು ದಾಖಲಾಗಿದೆ.
ತಾಲೂಕಿನ ದಾಸನಕೊಪ್ಪದ ೭೦ ವರ್ಷದ ವೃದ್ಧನೊರ್ವನಿಗೆ ಕೊವಿಡ್ ದೃಢಪಟ್ಟಿದೆ. ಭಾನುವಾರ ತಡರಾತ್ರಿ ಸರ್ಕಾರಿ ಆಸ್ಪತ್ರೆಗೆ ಜ್ವರ ಎಂದು ವೃದ್ಧನನ್ನು ಕರೆದುಕೊಂಡು ಬಂದಿದ್ದು, ಹೆಚ್ಚಿನ ಚಿಕಿತ್ಸೆಗೆ ಕಾರವಾರಕ್ಕೆ ಕರೆದೊಯ್ಯಲಾಗಿದೆ. ನಂತರ ಕಾರವಾರದಲ್ಲಿ ಪಾಸಿಟಿವ್ ಬಂದಿದ್ದು, ಅಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ದಾಸನಕೊಪ್ಪದ ಪೆಟ್ರೋಲ್ ಪಂಪ ಸಮೀಪದಲ್ಲಿ ವೃದ್ಧನ ಮನೆಯಾಗಿದ್ದು, ವೃದ್ಧನ ಮಗ ನ್ಯಾಯವಾದಿ ಎಂದು ಹೇಳಲಾಗಿದೆ. ಮಗ ಶಿರಸಿಯಿಂದ ಮನೆಗೆ ಪ್ರತಿ ದಿನ ಓಡಾಡುತ್ತಿದ್ದು, ಯಾವ ಹಿನ್ನಲೆಯಿಂದ ಕೊರೊನಾ ದೃಢಪಟ್ಟಿದೆ ಎನ್ನುವುದು ಇನ್ನ ಮೇಲಷ್ಟೇ ಅಂತಿಮವಾಗಬೇಕಿದೆ.