Wednesday, 1st December 2021

ಸಂಚಾರ ನಿಯಮ ಪಾಲಿಸುವುದೂ ದೇಶಾಭಿಮಾನವಲ್ಲವೇ?

ಇನ್ನೊಂದು ಮುಖ

ದೇವಿ ಮಹೇಶ್ವರ ಹಂಪಿನಾಯ್ಡು
ನಮ್ಮ ದೇಹದ ಅತ್ಯಂತ ಸೂಕ್ಷ್ಮ ಹಾಗೂ ತೂಕದ ಅಂಗವೆಂದರೆ ತಲೆ. ಸಮತೋಲ ತಪ್ಪಿಿ ಕೆಳಗೆ ಬಿದ್ದರೆ ಮೊದಲು ಬೀಳುವುದೇ ತಲೆ. ಇಂತಹ ತಲೆಗೆ ಹೆಚ್ಚು ಬಲವಾಗಿ ಹೊಡೆತ ಬಿದ್ದರೆ ಮೊದಲಿಗೆ ಪ್ರಜ್ಞೆ ಹೋಗಬಹುದು, ಕಿವಿಯಿಂದ ರಕ್ತಸ್ರಾಾವವಾಗಿ ಪ್ರಾಾಣ ಹೋಗಬಹುದು ಅಥವಾ ಮಿದುಳು ನಿಷ್ಕ್ರಿಿಯವಾಗಿ ಹೊಡೆತ ತಿಂದಾತ ಜೀವಂತ ಶವ ಆಗಲೂಬಹುದು. ಆದರೆ ಇದೆಲ್ಲ ನಮ್ಮ ತಲೆಗೇ ಹೋಗುವುದಿಲ್ಲ. ಟ್ರಾಾಫಿಕ್ ಪೊಲೀಸಣ್ಣನ ಸಮಾಧಾನಕ್ಕಾಾಗಿ ನೂರು ರುಪಾಯಿಯ ಕಳಪೆ ದರ್ಜೆಯ ಹೆಲ್ಮೆೆಟ್‌ನ್ನು ಕಾಟಾಚಾರಕ್ಕೆೆ ತಲೆ ಮೇಲಿಟ್ಟುಕೊಂಡು ವಾಹನ ನಡೆಸುತ್ತೇವೆ. ಅಚಾನಕ್ಕಾಾಗಿ ಅಪಘಾತವಾದಾಗ ನಮ್ಮ ತಲೆ ಕಾಯಬೇಕಾದ ಹೆಲ್ಮೇಟ್ಟೇ ನಮಗಿಂತ ಮೊದಲು ನೆಲಕ್ಕೆೆ ಬಿದ್ದಿರುತ್ತದೆ.

ಮನುಷ್ಯದೇಹದಲ್ಲಿನ ಯಾವುದೇ ಮೂಳೆ ಮುರಿದರೆ ಸರಿಯಾದ ಔಷಧಗಳಿಂದ ಮೂರ್ನಾಾಲ್ಕು ತಿಂಗಳಲ್ಲೇ ಅದು ಬೆಳೆದು ಒಂದಕ್ಕೊೊಂದು ಕೂಡಿಕೊಳ್ಳುತ್ತವೆ. ಇದು ಭಗವಂತ ಕೊಟ್ಟ ಅದ್ಭುತ ವರ. ಆದರೆ ತಲೆ ಕೆಟ್ಟರೆ ಆ ಭಗವಂತನೂ ಕ್ಷಮಿಸಲಾರ. ಹೆಲ್ಮೆೆಟ್ ಧರಿಸಿದರೆ, ಕನಿಷ್ಠ ಮನೆಯವರಿಗೆ ಒಬ್ಬ ತಂದೆ/ಗಂಡ ಸಂಭವಿಸುವ ಅಪಘಾತದಿಂದ ಹೇಗೋ ಪಾರಾಗುತ್ತಾಾನೆ ಎಂಬ ವಿಶ್ವಾಾಸವಾದರೂ ಇರುತ್ತದೆ. ಆದರೆ ಒಂದೇ ಏಟಿಗೆ ತಲೆ ಹೋದರೆ ಮನೆಯ ಆಧಾರವೇ ಕುಸಿಯುತ್ತದೆ. ಇಂದಿನ ಮಾಹಿತಿಯ ಪ್ರಕಾರ ನಮ್ಮ ದೇಶದಲ್ಲಿ ವರ್ಷಕ್ಕೆೆ ಐದು ಲಕ್ಷ ಅಪಘಾತಗಳಾಗುತ್ತಿಿದ್ದು ಒಂದೂವರೆ ಲಕ್ಷ ಜನರ ಸಾವುಗಳು ಸಂಭವಿಸುತ್ತಿಿವೆ. ಇವೆಲ್ಲವೂ ಸ್ವಯಂಕೃತ ನಿರ್ಲಕ್ಷ್ಯ ಮತ್ತು ಬೇರೆಯವರ ತಪ್ಪುುಗಳಿಂದಾದ ಕಾರಣಗಳೇ ಆಗಿರುತ್ತವೆ.

ನಾವುಗಳು ಸರಿಯಾಗಿದ್ದರೂ ಅನ್ಯರ ಯಡವಟ್ಟಿಿನಿಂದ ಒಂದೊಮ್ಮೆೆ ನಮ್ಮ ವಾಹನಗಳು ಮತ್ತು ನಮ್ಮ ಬಾಳೂ ಹಾಳಾಗುವ ಅಪಾಯವನ್ನು ಸರಿಯಾಗಿ ನಿರ್ವಹಿಸಲ್ಪಡದೇ ಕೆಟ್ಟ ಸ್ಥಿಿತಿಯಲ್ಲಿರುವ ರಸ್ತೆೆಗಳು ಒಡ್ಡುತ್ತವೆ. ಹೀಗಿರುವಾಗ ವಾಹನ ಸಂಚಾರ ನಿಯಮಗಳನ್ನು ಪಾಲಿಸುವುದಕ್ಕೂ ಅಹಂಕಾರ ಮತ್ತು ಆತುರ ಇದ್ದರೆ ಸರಿಯೇ ಸರಿ! ಇವೆರಡೂ ಇದ್ದ ಕಡೆ ಯುಮರಾಯನ ಉಪಸ್ಥಿಿತಿ ಖಂಡಿತ.

ನರೇಂದ್ರ ಮೋದಿಯವರ ಸರಕಾರ ಮೊದಲ ಅವಧಿಗೆ ಆಡಳಿತಕ್ಕೆೆ ಬಂದಾಗ ದೇಶದಲ್ಲಿನ ಭ್ರಷ್ಟಾಾಚಾರಕ್ಕೆೆ ಅಳತೆಗೋಲಾಗಿ ಕಂಡದ್ದು ಪ್ರಾಾದೇಶಿಕ ಸಾರಿಗೆ ಕಚೇರಿಗಳು.

ಅಂದರೆ ಆರ್‌ಟಿಓ. ಉಪ-ನೋಂದಣಿ ಕಚೇರಿ, ಕಂದಾಯ, ವಾಣಿಜ್ಯ ತೆರಿಗೆ, ಅಬಕಾರಿ, ತಾಲ್ಲೂಕು ಕಚೇರಿಗಳು ಸಾಲಿನಲ್ಲಿ ನಂತರ ನಿಲ್ಲುತ್ತವೆ. ಇಂತಹ ಹುತ್ತಕ್ಕೆೆ ಕೈಹಾಕಿರುವ ಕೇಂದ್ರ ಸರಕಾರ ಇದರ ಮೊದಲ ಕ್ರಮವಾಗಿ ಸಂಚಾರ ನಿಯಮಗಳ ಉಲ್ಲಂಘನೆಯ ದಂಡಗಳ ಮೊತ್ತವನ್ನು ಗಾಬರಿಗೊಳ್ಳುವಂತೆ ಏರಿಸಿದೆ. ಆದರೆ ಇದನ್ನು ಸ್ವೀಕರಿಸಲು ನಮ್ಮ ಪ್ರಜೆಗಳು ಮಾತ್ರ ಇನ್ನೂ ಮಾನಸಿಕವಾಗಿ ಸಿದ್ಧರಾಗಿಲ್ಲ. ಬದಲಾಗಿ ವಿರೋಧಿಸುಲು ಶುರುಹಚ್ಚಿಿದ್ದಾಾರೆ.

ಪ್ರಜೆಗಳು ಮದ್ಯ ಕುಡಿಯುವುದು ಬಿಟ್ಟರೆ ಅಬಕಾರಿ ಎಂಬ ಇಲಾಖೆಯೇ ಮುಚ್ಚಿಿಹೋಗುತ್ತದೆ. ಹಾಗೆಯೇ ನಾವುಗಳು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಬರಿಯ ಪೊಲೀಸರಿಗಲ್ಲ ಸಾಕ್ಷಾತ್ ಯಮನಿಗೂ ಹೆದರುವ ಅವಶ್ಯಕತೆ ಇಲ್ಲವೆಂಬುದನ್ನು ಸರಿಯಾಗಿ ಯೋಚಿಸಿದರೆ ಅರಿವಾಗುತ್ತದೆ. ಸರಕಾರವೇನಾದರೂ ಪೆಟ್ರೋೋಲ್, ಅಕ್ಕಿಿ, ಬೇಳೆ, ವಿದ್ಯುತ್ ಇತ್ಯಾಾದಿ ಅವಶ್ಯಕ ದಿನಬಳಕೆ ವಸ್ತುಗಳ ದರವನ್ನು ಹೆಚ್ಚಿಿಸಿದರೆ ಪ್ರತಿಭಟಿಸಬೇಕಾದದ್ದು ಸಹಜ. ಇಂತಹ ಕ್ರಮಗಳು ಬಡವರು- ಶ್ರೀಮಂತರು ಎಂಬ ಭೇದವನ್ನು ತೇಲಿಸಿಬಿಡುತ್ತವೆ. ಆದರೆ ದರ ಮತ್ತು ದಂಡದ ಮಧ್ಯೆೆಯಲ್ಲಿರುವ ವ್ಯತ್ಯಾಾಸವನ್ನೇ ನಾವುಗಳು ಮನಗಾಣುವುದಿಲ್ಲ. ದರ ಏರಿಕೆಯು ಗುಲಾಮಗಿರಿ ಕ್ರಮವೆಂಬ ಭಾವವಿರುತ್ತದೆ.

ಆದರೆ ಅದರ ಹಿಡಿತಕ್ಕೆೆ ಸಿಲುಕುವುದನ್ನು ಸಾಕ್ಷಾತ್ ನಾವುಗಳೇ ಇಲ್ಲವಾಗಿಸಿಕೊಳ್ಳಬಹುದು. ಉದಾಹರಣೆಗೆ ಇಂದು ವಾಹನ ಚಾಲನೆ ಮಾಡುವಾಗ ಅಪ್ರಾಾಪ್ತರು ಮುಖ ಕಾಣಿಸದಂತೆ ಹೆಲ್ಮೆೆಟ್ ಧರಿಸುತ್ತಾಾರೆ, ಪರವಾನಗಿ ಇಲ್ಲದವರು ಪೊಲೀಸರಿಂದ ತಪ್ಪಿಿಸಿಕೊಳ್ಳಲು ಕಳ್ಳರಾಗಿ ಒಂದು ಮೈಲಿಯ ರಸ್ತೆೆಯನ್ನು ಬಿಟ್ಟು ಅಡ್ಡದಾರಿ ಹಿಡಿದು ಐದಾರು ಮೈಲಿ ಚಲಿಸುತ್ತಾಾರೆ. ವಾಹನ ನಿಲ್ಲಿಸದಂತೆ ಮಾಡುವ ಪ್ರಯತ್ನದಲ್ಲಿ ಕಾರಿನ ಹಿಂದೆ ಮುಂದೆ ಸಂಘಟನೆಗಳ ಹೆಸರು, ‘ಅದರ ರಾಜ್ಯಾಾಧ್ಯಕ್ಷ, ಇದರ ರಾಷ್ಟ್ರಾಾಧ್ಯಕ್ಷ’ ಎಂದೆಲ್ಲಾಾ ಫಲಕ ತೂಗಿಸುತ್ತಾಾರೆ. ‘ಮಾನವ ಹಕ್ಕುಗಳು, ಆ ನಿರ್ಮೂಲನೆ ಈ ನಿರ್ಮೂಲನೆ’ಗಳೆಂಬ ಸಂಘಟನೆಗಳ ಹೆಸರುಗಳನ್ನು ಹಾಕಿಸಿಕೊಳ್ಳುವುದೂ ಇದೆ.. ಇನ್ನೂ ಕೆಲ ನಕಲಿಗಳು ‘ಪ್ರೆೆಸ್’, ‘ಪೊಲೀಸ್’ ಭಿಡೆಯಿಲ್ಲದೆ ರನ್ನು ಬರೆಸಿಕೊಳ್ಳುತ್ತಾಾರೆ. ಇಂತಹ ಗುರಾಣಿಗಳೆಲ್ಲ ಅವರಿಗೆ ಏಕೆ ಬೇಕಾಗುತ್ತವೆಂದರೆ, ಒಂದೋ ವಾಹನದಲ್ಲಿ ಎಲ್ಲವೂ ಸರಿ ಇರುವುದಿಲ್ಲ ಅಥವಾ ಚಾಲಕನೇ ಕಾನೂನುಬಾಹಿರನಾಗಿರುತ್ತಾಾನೆ ಎಂಬುದು ಸ್ಪಷ್ಟ. ಇಂತಹವರಿಂದಲೇ ಭ್ರಷ್ಟಾಾಚಾರದ ಹೂಗೊಂಚಲುಗಳು ಸಾರಿಗೆ ಇಲಾಖೆಯಲ್ಲಿ ಅರಳುವುದು.

ಇನ್ನು ಕೆಲವರಿರುತ್ತಾಾರೆ, ದಾರಿಯಲ್ಲಿ ನೂರು ರುಪಾಯಿ ಕಳೆದುಕೊಂಡರೂ ಪರವಾಗಿಲ್ಲ, ಸಿಕ್ಕಿಿಬಿದ್ದು ಪೊಲೀಸರಿಗೆ ಮಾತ್ರ ಒಂದು ರುಪಾಯಿ ಸಹ ದಂಡ ಕಟ್ಟಬಾರದೆಂಬ ಸ್ವಾಾಭಿಮಾನದಿಂದ ರಸ್ತೆೆಗಿಳಿಯುವ ಮೊದಲೇ ಎಲ್ಲವನ್ನೂ ಸರಿಯಾಗಿ ಇಟ್ಟುಕೊಂಡಿರುತ್ತಾಾರೆ. ಇಂಥವರ ವಿಷಯದಲ್ಲಿ (ದಂಡದ ಮೊತ್ತ ಎಷ್ಟಾಾದರೂ ಇರಲಿ) ದಂಡವೇ ದಂಡವಾಗಿ ಹೋಗುತ್ತದೆಯಲ್ಲವೆ? ಇಷ್ಟಕ್ಕೂ ಏಕಾಏಕಿ ದಂಡದ ಮೊತ್ತವನ್ನು ಏರಿಸಿರುವುದು ಚಾಲನೆಯಲ್ಲಿ ಒಂದು ಬದ್ಧತೆ-ಪ್ರಾಾಮಾಣಿಕತೆ- ಶಿಸ್ತು-ಹೊಣೆಗಾರಿಕೆಯನ್ನು ರೂಪಿಸಿ ಆ ಮೂಲಕ ಅಪಘಾತಗಳನ್ನು ತಪ್ಪಿಿಸಿ ಜೀವಗಳನ್ನು ಉಳಿಸುವ ಏಕೈಕ ಉದ್ದೇಶದಿಂದಷ್ಟೆೆ. ಇಲ್ಲಿ ಬಡವ-ಶ್ರೀಮಂತ, ಹಳೆಯ ವಾಹನ -ಹೊಸ ವಾಹನ, ದೊಡ್ಡದು-ಚಿಕ್ಕದು ಎಂಬ ಭೇದವಿಲ್ಲ.

ನಮ್ಮ ಮನೆಯ ಗೇಟಿನ ಮುಂದೆ ‘ನೋ ಪಾರ್ಕಿಂಗ್’ ಎಂಬ ಫಲಕ ಹಾಕಿದ್ದಾಾಗ ಅದರ ಮುಂದೆ ಯಾರೋ ವಾಹನ ನಿಲ್ಲಿಸಿದರೆ ಕೆರಳುವ ನಾವು ಸಂಚಾರ ನಿಯಮಗಳನ್ನು ಪಾಲಿಸುವ ನೈತಿಕತೆ ತೋರಲೇನು ಅಡ್ಡಿಿ? ಗಮನಿಸಿ ನೋಡಿ, ನಾವು ಸರಿಯಾಗಿ ವಾಹನ ಚಲಿಸುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಾಾ ನಡೆದುಕೊಂಡು ಹೋಗುವ ಪಾದಚಾರಿ ಅಡ್ಡಬಂದರೆ ಗದರುತ್ತೇವೆ. ಅಂತಹುದರಲ್ಲಿ ಸವಾರ ಮೊಬೈಲ್ ಬಳಸುತ್ತ ಅಥವಾ ಅತಿ ವೇಗವಾಗಿ ನಮ್ಮ ಮುಂದೆ ಚಲಿಸಿದರೆ ಎಷ್ಟೊೊಂದು ಕೋಪಗೊಳ್ಳಬೇಕು, ಆತನನ್ನು ಬಯ್ಯಬೇಕು! ಕುಡಿದು ವಾಹನ ಚಾಲನೆ ಮಾಡಿ ಅಪಘಾತ ಮಾಡಿದರೆ ಸಾರ್ವಜನಿಕರೇ ಆ ಚಾಲಕನನ್ನು ಹಿಡಿದು ರುಬ್ಬುತ್ತಾಾರೆ.

ಸಿಗ್ನಲ್‌ನಲ್ಲಿ ಹಸುರು ಮೂಡಲು ಇನ್ನೂ ಐದಾರು ಸೆಕೆಂಡುಗಳು ಇದ್ದಾಾಗಲೇ ಜೋರಾಗಿ ಹಾರನ್ ಬಾರಿಸಿ ಅಸಹನೆ ಪ್ರದರ್ಶಿಸುವ ಮಹಾಪ್ರಜೆಗಳು ಅಷ್ಟೇ ಸ್ವಾಾಭಿಮಾನದಿಂದ ಎಲ್ಲಾಾ ದಾಖಲೆಗಳನ್ನು ಇಟ್ಟುಕೊಂಡು ಹೊರಡುವುದು ಸರಿಯಲ್ಲವೇ? ಹಾಗೊಮ್ಮೆೆ ನಾವುಗಳು ಸರಿಯಿದ್ದು ಬೇರೆಯವರ ಅತಿ ವೇಗದಿಂದಲೋ, ನಿಯಮ ಉಲ್ಲಂಘನೆಯಿಂದಲೋ ನಮಗೆ, ನಮ್ಮ ವಾಹನಕ್ಕೆೆ ಧಕ್ಕೆೆಯಾದರೆ ಮೊದಲು ಪ್ರಶ್ನಿಿಸುವುದು ಆತನ ಸಂಚಾರ ಸಾಚಾತನಗಳನ್ನೇ ಅಲ್ಲವೇ? ಆತನ ಕುತ್ತಿಿಗೆ ಪಟ್ಟಿಿ ಹಿಡಿದು ‘ನಿನ್ನ ಬಳಿ ಡಿಎಲ್ ಇದೆಯಾ’ ಎಂದು ಆಕ್ರೋೋಶ ತೋರುವುದಿಲ್ಲವೇ? ಇದನ್ನೇ ಪೊಲೀಸರು ಮಾಡಿದರೆ ನಮಗೇಕೆ ದಿಗಿಲು, ಅಸಹನೆ?

ಸರಕಾರ ಇಂತಹ ಕಟ್ಟುನಿಟ್ಟಿಿನ ಕ್ರಮಗಳ ಪ್ರತಿಯಾಗಿ ರಸ್ತೆೆಗಳ ಗುಣಮಟ್ಟವನ್ನು ಎತ್ತರಿಸುವ ಅವಶ್ಯಕತೆ ಖಂಡಿತ ಇದೆ. ಸಮೀಕ್ಷೆಯೊಂದರ ಪ್ರಕಾರ ಅಪಘಾತಗಳಿಗೆ ಅತಿ ಹೆಚ್ಚು ಕಾರಣವಾಗುತ್ತಿಿರುವುದು ಕಳಪೆ ರಸ್ತೆೆಗಳು. ಹಳ್ಳವಿರುವ ರಸ್ತೆೆ ಕಂಡ ಕೂಡಲೇ ಯಾರೂ ಅದರ ಮೇಲೆ ಚಲಿಸುವುದಿಲ್ಲ. ಕೂಡಲೇ ಬಲಕ್ಕೋೋ ಎಡಕ್ಕೋೋ ತಿರುಗಿಸುತ್ತೇವೆ. ಇದನ್ನು ನಿರೀಕ್ಷಿಸದ ಹಿಂಬದಿಯ ವಾಹನ ಸವಾರ ಗಲಿಬಿಲಿಗೊಂಡು ಅಪಘಾತಕ್ಕೆೆ ಕಾರಣವಾಗುತ್ತದೆ. ಆದ್ದರಿಂದ ಮೊದಲು ರಸ್ತೆೆಯ ಗುಣಮಟ್ಟ ಸುಧಾರಿಸಲೇ ಬೇಕಿದೆ. ಇನ್ನು ಹೆತ್ತವರು ತಮ್ಮ ಮಕ್ಕಳಿಗೆ ಚಾಲನಾ ಪರವಾನಗಿ ಮಾಡಿಸಿಕೊಡುವ ಮುಂಚೆಯೇ ದ್ವಿಿಚಕ್ರವಾಹನಗಳನ್ನು ಕೊಡಿಸುತ್ತಾಾರೆ. ಬೆಂಗಳೂರಿನ ರಸ್ತೆೆಗಳಿಗೆ ಲಾಯಕ್ಕಲ್ಲದ ಯಮವೇಗದ ಲಕ್ಷಾಂತರ ರುಪಾಯಿಗಳ ಬೈಕ್‌ಗಳನ್ನು ಕೊಡಿಸಿ ಅವರನ್ನು ರಸ್ತೆೆಗಳ ‘ಆತಂಕವಾದಿ’ಗಳನ್ನಾಾಗಿಸುತ್ತಾಾರೆ. ಇಂಥವರಿಗೆ ಸರಿಯಾದ ಪಾಠ ಕಲಿಸುವ ಅವಶ್ಯಕತೆ ಇದೆ.

ಇನ್ನು ಬಹುಪಾಲು ಮಂದಿ ವಾಹನ ವಿಮೆ ಪಾವತಿಸುವುದೇ ಇಲ್ಲ. ಕಾರಣ ಅದರ ಮೇಲೆ ನಂಬಿಕೆಯೇ ಹೊರಟುಹೋಗಿದೆ. ಇನ್ಷುರೆನ್‌ಸ್‌ ಕಂಪನಿಗಳು ಪಾಲಿಸಿ ಮಾಡುವಾಗ ತೋರುವ ಆಸಕ್ತಿಿ ಅಪಘಾತವಾದಾಗ ತೋರುವುದು ಸಾಧ್ಯವೇ ಇಲ್ಲ. ವಾಹನದ ಯಾವುದಾದರೂ ಒಂದು ಭಾಗ ಜಖಂಗೊಂಡರೆ ಅದಕ್ಕಾಾಗಿ ವಿಮಾ ಕಂಪನಿಯಿಂದ ಪರಿಹಾರ ಪಡೆಯಬೇಕಾದರೆ ಹರಸಾಹಸ ಪಡಬೇಕು. ಹೀಗಾಗಿ ಇನ್ಷುರೆನ್‌ಸ್‌ ಪಾವತಿಸುವುದೇ ಒಂದು ದಂಡವೆಂಬ ಅನುಭವ ವಾಹನ ಮಾಲಿಕರಲ್ಲಿರುತ್ತದೆ. ಆದ್ದರಿಂದ ವಾಹನಕ್ಕೆೆ ಅಥವಾ ಸವಾರರಿಗೆ ಹಾನಿಯಾದರೆ ವಿಮಾ ಕಂಪನಿಗಳು ಇಂತಿಷ್ಟು ದಿನಗಳಲ್ಲಿ ಪ್ರಕರಣಗಳನ್ನು ಮುಗಿಸಿ ಸಂತಸ್ತ್ರರಿಗೆ ಪರಿಹಾರ ನೀಡಬೇಕು ಎಂಬ ಕಟ್ಟಾಾಜ್ಞೆಯನ್ನು ಸರಕಾರ ವಿಧಿಸಬೇಕಿದೆ.

ಸಂಚಾರ ಪೊಲೀಸ್ ಸಿಬ್ಬಂದಿ ಸಹ ಇನ್ನಷ್ಟು ಜವಾಬ್ದಾಾರಿಯಿಂದ ವರ್ತಿಸಬೇಕು. ದರ್ಪ, ದುರಹಂಕಾರ, ಮರ್ಯಾದೆ ಇಲ್ಲದ ಮಾತುಗಳನ್ನಾಾಡದೆ ಚಾಲಕರನ್ನು ವಿಶ್ವಾಾಸದಿಂದ ಕಾಣುವ, ಆತನ ಆ ಕ್ಷಣದ ಪರಿಸ್ಥಿಿತಿಯನ್ನು ಅರ್ಥಮಾಡಿಕೊಳ್ಳುವ ಸೌಜನ್ಯ-ಗೌರವವನ್ನು ತೋರಬೇಕಾದ ಅವಶ್ಯಕತೆ ಇದೆ. ಪೊಲೀಸರನ್ನು ಕಂಡರೆ ಯಮದೂತರನ್ನು ಕಂಡಂತೆ ಹೆದರಿ ಏಕಮುಖ ಸಂಚಾರದ ರಸ್ತೆೆಗಳಲ್ಲಿ ವಿರುದ್ಧ ದಿಕ್ಕಿಿನಲ್ಲಿ ಹೊರಟು ಅನೇಕ ಅಪಘಾತಗಳು ಉಂಟಾಗುವ ಸಾಧ್ಯತೆ ಇಲ್ಲದಿಲ್ಲ. ನಾಗರಿಕರ ರಕ್ಷಣೆಗಾಗಿ ಇರುವ ಪೊಲೀಸರು ಚಾಲಕರೊಂದಿಗೆ ವಿಶ್ವಾಾಸದಿಂದ ವರ್ತಿಸಿ, ತಪ್ಪುುಗಳನ್ನು ತಿಳಿಸಿ ಮೊದಲಿಗೆ ಒಂದು ಅವಕಾಶವನ್ನು ನೀಡಿ ಆ ನಂತರ ತಮ್ಮ ಕರ್ತವ್ಯದ ಬಿಸಿ ಮುಟ್ಟಿಿಸುವಂತಾಗಬೇಕು.

ಇಷ್ಟಕ್ಕೂ ನಮ್ಮ ದೇಶದ ಕಾನೂನು ನಿಯಮ ಕಟ್ಟಳೆಗಳನ್ನು ನಾವುಗಳೇ ಪಾಲಿಸದಿದ್ದರೆ ಹೇಗೆ? ದೇಶದ ನೀತಿ ನಿಯಮಗಳನ್ನು ಗೌರವಿಸುವುದೂ ದೇಶಾಭಿಮಾನದ ಒಂದು ಹೆಜ್ಜೆೆ. ದೇಶದಲ್ಲಿ ಪ್ರಜಾಪ್ರಭುತ್ವಕ್ಕೆೆ ಧಕ್ಕೆೆಯಾಗುತ್ತಿಿದೆ, ಸಂವಿಧಾನ ಅಪಾಯದಲ್ಲಿದೆ ಎಂದು ಚೀರುವವರು ದೇಶದ್ರೋಹಿಗಳ ಪರ ಪ್ರತಿಭಟಿಸುವುದನ್ನು ಬಿಟ್ಟು ಇಂತಹ ಸಮಾಜಮುಖಿ ಕ್ರಮಗಳ ಪರ ಒಲವು ತೋರಲಿ. ಒಮ್ಮೆೆ ಹೀಗೆ ಮಾಡಿ; ಎಲ್ಲಾಾ ರೀತಿಯ ದಾಖಲೆಗಳನ್ನು ಇಟ್ಟುಕೊಂಡು ಸಂಚಾರ ಪೊಲೀಸರ ಮುಂದೆ ರಾಜಾರೋಷವಾಗಿ ವಾಹನ ಚಲಿಸಿ. ಅದರ ಮಜವೇ ಬೇರೆ. ಒಂದು ವೇಳೆ ಅವರು ತಡೆದು ನಿಲ್ಲಿಸಿದರೋ, ಕೇಳುವ ಎಲ್ಲಾಾ ದಾಖಲೆಗಳನ್ನು ತೋರಿಸಿ ಯಶಸ್ವಿಿಯಾಗಿ ಹೊರಟು ನೋಡಿ, ಆಗ ಸಿಗುವ ಸಾರ್ಥಕತೆಯೇ ಬೇರೆ!
==