Friday, 2nd December 2022

ಯಾದಗಿರಿಯಲ್ಲಿ ತರಗತಿ ಆರಂಭ, ವಿದ್ಯಾರ್ಥಿಗಳಿಗೆ ಚಾಕೊಲೆಟ್ ನೀಡಿ ಸ್ವಾಗತ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರದಿಂದ 1 ರಿಂದ 5 ನೇ ತರಗತಿ ಆರಂಭವಾಯಿತು.

ಶಾಲಾ ಸಮವಸ್ತ್ರ ಧರಿಸಿ ಆಗಮಿಸಿದ ವಿದ್ಯಾರ್ಥಿಗಳು, ಮಾಸ್ಕ್ ಧರಿಸದವರಿಗೆ ಶಿಕ್ಷಕರು ಮಾಸ್ಕ್ ವಿತರಣೆ ಮಾಡಿದರು. ಶಾಲಾವರಣದೊಳಗೆ ಪ್ರವೇಶ ಪಡೆದ ನಂತರ ಕೈಗಳಿಗೆ ಸ್ಯಾನಿಟೈಸ್ ಸಿಂಪರಣೆ ಮಾಡಲಾಯಿತು.

ಹಲವಾರು ತಿಂಗಳ ನಂತರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಚಾಕೊಲೆಟ್ ನೀಡಿ ಬರಮಾಡಿ ಕೊಂಡರು. ಕೆಲ ಕಡೆ ತಳಿರು ತೋರಣ ಕಟ್ಟಿ ಶಾಲೆಯನ್ನು ಶೃಂಗಾರ ಮಾಡಲಾಗಿತ್ತು. ಜಿಲ್ಲೆಯಲ್ಲಿ ಸರ್ಕಾರಿ, ಅನುದಾನ ಸಹಿತ, ಅನುದಾನ ರಹಿತ, ಖಾಸಗಿ ಸೇರಿ 1,324 ಶಾಲೆಗಳು ಪ್ರಾಥಮಿಕ ಶಾಲೆ ಗಳಿವೆ.

ಭಾನುವಾರವೇ ಶಾಲಾ ಕೊಠಡಿ, ಶೌಚಾಲಯ, ಅಡುಗೆ ಕೋಣೆ, ಆಟದ ಮೈದಾನ ಸೇರಿದಂತೆ ಶಾಲಾವಾರಣದಲ್ಲಿ ಸ್ಯಾನಿಟೈಸ್ ಸಿಂಪಡಿಸಿ ಸ್ವಚ್ಛತೆ ಕೈಗೊಳ್ಳಲಾಗಿತ್ತು. ಶಿಕ್ಷಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೈಗೆ ಕಪ್ಪು ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.