Friday, 18th June 2021

ಮ್ಯಾನ್ಮಾರ್: ಮಿಲಿಟರಿ ವಿಮಾನ ಪತನ, 12 ಮಂದಿ ಸಾವು

ಮಂಡಲಾಯ್: ಮ್ಯಾನ್ಮಾರ್ ದೇಶದ ಅತಿದೊಡ್ದ ನಗರ ಮಂಡಲಾಯ್ ಪ್ರದೇಶದಲ್ಲಿ ಗುರುವಾರ ಮಿಲಿಟರಿ ವಿಮಾನ ಪತನ ವಾಗಿ ಪ್ರಯಾಣಿಸುತ್ತಿದ್ದ 12 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮಿಲಿಟರಿ ವಿಮಾನದಲ್ಲಿ ಮಿಲಿಟರಿ ಸಿಬ್ಬಂದಿ ಹಾಗೂ ಕೆಲ ಬೌದ್ಧ ಸನ್ಯಾಸಿ ಗಳಿದ್ದರು. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಪತನಗೊಂಡಿದೆ. ಇಲ್ಲಿಗೆ ಸಮೀಪದ ಬೌದ್ಧವಿಹಾರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೌದ್ಧ ಸನ್ಯಾಸಿಗಳು ವಿಮಾನ ದಲ್ಲಿ ತೆರಳುತ್ತಿದ್ದರು.

ಮಂಡಲಾಯ್ ಪ್ರದೇಶದ ಬೆಟ್ಟ ಗುಡ್ಡ ತಪ್ಪಲಿನ ಪಟ್ಟಣ ಪಿಯಿನ್ ಊ ಎಲ್ ವಿನ್ (Pyin Oo Lwin)ನ ಉಕ್ಕಿನ ಘಟಕದಿಂದ 300 ಮೀಟರ್ ದೂರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಓರ್ವ ಪೈಲಟ್ ಹಾಗೂ ಒಬ್ಬ ಪ್ರಯಾಣಿಕರು ಬದುಕುಳಿ ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇವರಿಬ್ಬ ರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮ್ಯಾನ್ಮಾರ್ ದೇಶದಲ್ಲಿದ್ದ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು ಮಿಲಿಟರಿ ಆಡಳಿತ ಆರಂಭವಾದ ನಂತರ ವಿಮಾನಯಾನ ಸುರಕ್ಷತೆ ಬಗ್ಗೆ ಗಮನಹರಿಸಿಲ್ಲ, ಮಿಲಿಟರಿ ದುರಾಡಳಿತಕ್ಕೆ ಬೇಸತ್ತು ಸಾರ್ವಜನಿಕರು ಬಂಧಿತ ನಾಯಕಿ ಆಂಗ್ ಸ್ಯಾನ್ ಸೂ ಕಿ ಅವರನ್ನು ಬಿಡುಗಡೆ ಮಾಡಲು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *