Wednesday, 1st December 2021

ಆರೋಪಿ ಪಿಎಸ್‌ಐಗೆ 14 ದಿನ ನ್ಯಾಯಾಂಗ ಬಂಧನ

ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣದ ಆರೋಪಿ ಪಿಎಸ್‌ಐ ಅರ್ಜುನ್ ಅವರಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನದ ಒಳಪಡಿಸಿ ಆದೇಶ ನೀಡಿದೆ.

ದಲಿತ ಯುವಕ ಪುನೀತ್ ಗೋಣಿಬೀಡು ಪಿಎಸ್‌ಐ ಅರ್ಜುನ್ ಅವರು ಮೇ.10 ರಂದು ಗೊಣಿಬೀಡು ಪೊಲೀಸ್ ಠಾಣೆಯಲ್ಲೆ ದೈಹಿಕ ಹಲ್ಲೆ ನಡೆಸಿ ಮೂತ್ರ ಕುಡಿಸಿದ್ದು, ಈ ಸಂಬಂಧ ನೊಂದ ಯುವಕ ಹಿರಿಯ ಪೊಲೀಸ್ ಅಧಿಕಾರಿ ಗಳಿಗೆ ದೂರು ನೀಡಿದ್ದರು.

ಬಳಿಕ ಪಿಎಸ್‌ಐ ವಿರುದ್ಧ ಗೋಣಿಬೀಡು ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಅರ್ಜುನ್ ಅವರನ್ನು ಅಮಾ ನತು ಮಾಡಿ ಪ್ರಕರಣದ ತನಿಖೆಯನ್ನು ಸಿಐಡಿ ಗೆ ವಹಿಸಿತ್ತು. ಪಿಎಸ್‌ಐ ಅರ್ಜುನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಜಾಮೀನು ಅರ್ಜಿ ಯನ್ನು ತಿರಸ್ಕರಿಸಿತ್ತು.

ಸಿಐಡಿ ಬೆಂಗಳೂರಿನಲ್ಲಿ ಆರೋಪಿ ಅರ್ಜುನ್ ಅವರನ್ನು ಬಂಧಿಸಿದ್ದು, ಗುರುವಾರ ಬೆಂಗಳೂರಿನಿಂದ ಚಿಕ್ಕಮಗ ಳೂರಿಗೆ ಕರೆ ತಂದ ಸಿಐಡಿ ಪೊಲೀಸರ ತಂಡ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ನ್ಯಾಯಾಧೀಶರಾದ ಪುಷ್ಪಲತಾ ಆರೋಪಿ ಅರ್ಜುನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನದ ಆದೇಶ ಹೊರಡಿಸಿದ್ದಾರೆ.