Tuesday, 17th May 2022

ಇಂಜಿನಿಯರಿಂಗ್ ಕಾಲೇಜಿನ 140 ವಿದ್ಯಾರ್ಥಿಗಳಿಗೆ ಕರೋನಾ ಪಾಸಿಟಿವ್

#corona

ಮಂಡ್ಯ: ಜಿಲ್ಲೆಯ ಒಂದೇ ಕಾಲೇಜಿನ 140 ವಿದ್ಯಾರ್ಥಿಗಳಿಗೆ ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಶಾಲೆಗೆ ಐದು ದಿನ ರಜೆಯನ್ನು ಘೋಷಣೆ ಮಾಡಲಾಗಿದೆ.

ಜಿಲ್ಲೆಯ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕರೊನಾ ಸ್ಪೋಟವೇ ಉಂಟಾಗಿದೆ. 140 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಕಳೆದ ಮೂರು ದಿನ ಗಳಲ್ಲಿ 140 ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾಗಿದೆ.

ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ 350 ಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಸಾಮೂಹಿಕ ಪರೀಕ್ಷೆ ಮಾಡಲಾಗಿತ್ತು. ಬಳಿಕ, 140 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಎಂದು ದೃಢಪಟ್ಟಿದೆ. ಇದರಲಿ 80 ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ವಾಸವಾಗಿದ್ದರು. ಸದ್ಯ ಎಲ್ಲರನ್ನು ಹಾಸ್ಟೆಲ್ ನಲ್ಲಿ ಐಸೋಲೇಷನ್ ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.

ಅಲ್ಲದೇ ಮನೆಯಲ್ಲಿದ್ದವರಿಗೆ ಹೋಂ ಐಸೋಲೆಷನ್ ಗೆ ಸೂಚನೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಆಡಳಿತ ಮಂಡಳಿ ಕಾಲೇಜಿಗೆ 5 ದಿನ ರಜೆ ಘೋಷಣೆ ಮಾಡಿದೆ.