Tuesday, 9th August 2022

ನಿಯಂತ್ರಣ ತಪ್ಪಿ ಉರುಳಿದ ಟಂಟಂ ವಾಹನ: 15 ವಿದ್ಯಾರ್ಥಿಗಳಿಗೆ ಗಾಯ

ಹುಬ್ಬಳ್ಳಿ: ಹುಬ್ಬಳ್ಳಿಯ ಮಣಕವಾಡದ ಬಳಿ ಟಂಟಂ ವಾಹನದಲ್ಲಿ ಶಾಲೆಗೆ ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಪರಿಣಾಮ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಹುಬ್ಬಳ್ಳಿಯ ಮಣಕವಾಡದಿಂದ ನಲವಡಿ ಸರ್ಕಾರಿ ಶಾಲೆಗೆ ಟಂಟಂ ವಾಹನದಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆರಳು ತ್ತಿದ್ದರು. ಈ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಣಕವಾಡ-ನಲವಡಿಗೆ ಬಳಿಯಲ್ಲಿ ಪಲ್ಟಿಯಾಗಿದೆ.

ಗಾಯಾಳು ವಿದ್ಯಾರ್ಥಿಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ದುರಂತಕ್ಕೆ ಮಣಕವಾಡದಿಂದ ನಲವಡಿ ಸರ್ಕಾರಿ ಶಾಲೆಗೆ ತೆರಳಲು ಸಾರಿಗೆ ಬಸ್ ಸೌಲಭ್ಯವಿಲ್ಲದ್ದೇ ಕಾರಣ ಎನ್ನಲಾಗಿದೆ.