Thursday, 1st December 2022

ಮುಷ್ಕರ ಬಿಟ್ಟು ಕೆಲಸಕ್ಕೆ ಹಾಜರಾಗಿ; ಡಿಸಿಎಂ ಸವದಿ

ಮುಷ್ಕರದಿಂದ 170 ಕೋಟಿ ರೂ. ನಷ್ಟ

ಬೀದರ್ : ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ಗುರುವಾರ 9 ನೇ ದಿನಕ್ಕೆ ಕಾಲಿಟ್ಟಿದ್ದು, 170 ಕೋಟಿ ರೂ. ನಷ್ಟವಾಗಿದೆ ಹೀಗಾಗಿ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ರಾಜ್ಯದಲ್ಲಿ 4,500 ಸಾರಿಗೆ ಬಸ್ ಸಂಚರಿಸಲಿವೆ. ನಾಳೆ 5 ಸಾವಿರ ಬಸ್ ಗಳು ಓಡಾಡುವ ವಿಶ್ವಾಸವಿದೆ. ರಾಜ್ಯದಲ್ಲಿ 24 ಸಾವಿರ ಖಾಸಗಿ ಬಸ್ ಗಳು ರಸ್ತೆಗಿಳಿದಿವೆ. ಇಲ್ಲಿಯವರೆಗೆ ಮುಷ್ಕರದಿಂದ 170 ಕೋಟಿ ರೂ. ಲಾಸ್ ಆಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಈವರೆಗೆ 59 ಕೆಎಸ್ ಆರ್ ಟಿಸಿ ಬಸ್ ಗಳ ಮೇಲೆ ಕಲ್ಲು ಎಸೆಯಲಾಗಿದೆ. ಇದು ಸರಿಯಲ್ಲ. ಕಲ್ಲು ತೂರುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.