Friday, 12th August 2022

ವಿಷಾನಿಲ ಸೋರಿಕೆ: ಇಬ್ಬರ ಸಾವು, ಐವರು ಗಂಭೀರ

ಮಂಗಳೂರು: ವಿಶೇಷ ಆರ್ಥಿಕ ವಲಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನು ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆಯಾಗಿ, ಇಬ್ಬರು ಕಾರ್ಮಿಕರು ಮೃತಪಟ್ಟು, ಐವರ ಸ್ಥಿತಿ ಗಂಭೀರವಾಗಿದೆ.

ಮಂಗಳೂರಿನ ಎಸ್ ಇ ಝಡ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನು ಫ್ಯಾಕ್ಟರಿಯಲ್ಲಿ ಕಾರ್ಮಿಕರನೊಬ್ಬ ತ್ಯಾಜ್ಯ ಘಟಕ ಶುಚಿಗೊಳಿಸುವ ಸಂದರ್ಭ ಏಕಾಏಕಿ ಅಸ್ವಸ್ಥಗೊಂಡಿದ್ದಾನೆ. ಆತನ ರಕ್ಷಣೆಗಾಗಿ 8 ಕಾರ್ಮಿಕರು ಧಾವಿಸಿದಾಗ, ಅವರು ಅಸ್ವಸ್ಥಗೊಂಡಿದ್ದಾರೆ.