Wednesday, 28th July 2021

200 ಕೆ‌ಜಿ ಗಾಂಜಾ, 3 ತಲವಾರ್, ಒಂದು‌ ಚಾಕು ವಶ: ನಾಲ್ಕು ಮಂದಿ ಬಂಧನ

ಮಂಗಳೂರು: ನಾಲ್ವರನ್ನು ಬಂಧಿಸಿರುವ ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸರು, ಆರೋಪಿಗಳಿಂದ 200 ಕೆ‌ಜಿ ಗಾಂಜಾ, 3 ತಲವಾರ್, ಒಂದು‌ ಚಾಕು ವಶಕ್ಕೆ ಪಡೆದಿದ್ದಾರೆ.

ಮೂಡುಬಿದಿರೆ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.

ಕಾಸರಗೋಡಿನ ಮುಹಮ್ಮದ್ ಫಾರೂಕ್, ಕೊಡಗಿನ ಸೈಯ್ಯದ ಮೊಹಮ್ಮದ್, ಮುಡಿಪುವಿನ ಮೊಹಮ್ಮದ್ ಅನ್ಸಾರ್, ಮಂಜೇಶ್ವರದ ಮೊಹಿಯುದ್ದೀನ್ ನವಾಜ್ ಬಂಧಿತ ಆರೋಪಿಗಳು ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *