Tuesday, 9th August 2022

ಆಸ್ಪತ್ರೆಯ 21 ಮಂದಿಗೆ ಸೋಂಕು, ಕ್ವಾರಂಟೈನ್‌

VIMS

ಬಳ್ಳಾರಿ: ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯ ವಿದ್ಯಾರ್ಥಿ, ಸಿಬ್ಬಂದಿ ಸೇರಿ 21 ಮಂದಿಗೆ ಕರೋನಾ ಸೋಂಕು ತಗುಲಿದೆ. ಒಂದೇ ಆಸ್ಪತ್ರೆಯ 21 ಮಂದಿಗೆ ಸೋಂಕು ತಗುಲಿದ್ದು, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸ ಲಾಗಿದೆ.

ಕರ್ನಾಟಕದಲ್ಲಿ ವೈರಸ್ 3ನೇ ಅಲೆಗೆ ಮುನ್ನುಡಿ ಎಂಬಂತೆ ಒಂದೇ ದಿನ ಬರೋಬ್ಬರಿ 2,479 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರು ನಗರವೊಂದರಲ್ಲೇ ಮಂಗಳವಾರ 2053 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಬೆಂಗಳೂರಿನ ನಂತರದ ಸ್ಥಾನದಲ್ಲಿ ಮಂಗಳೂರು 75 ಪ್ರಕರಣಗಳು ದೃಢಪಟ್ಟಿವೆ. ಉಡುಪಿ 72, ಮೈಸೂರು 48, ಬೆಳಗಾವಿ 45, ಧಾರವಾಡ 29, ಹಾಸನ 18, ಮಂಡ್ಯ 17, ಕಲಬುರಗಿ 16, ಬೆಂಗಳೂರು ಗ್ರಾಮಾಂತರ 15, ಕೋಲಾರ 14, ತುಮಕೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಲಾ 11 ಪ್ರಕರಣಗಳು ದೃಢಪಟ್ಟಿವೆ.

ಇನ್ನುಳಿದಂತೆ ಬಾಗಲಕೋಟೆ 02, ಬಳ್ಳಾರಿ 09, ಬೀದರ್ 02, ಚಾಮರಾಜನಗರ 02, ಚಿಕ್ಕಬಳ್ಳಾಪುರ 05, ಚಿಕ್ಕಮಗಳೂರು 04, ಚಿತ್ರದುರ್ಗ 02, ದಾವಣ ಗೆರೆ 03, ಗದಗ 02, ಕೊಡಗು 07, ಕೊಪ್ಪಳ 01, ರಾಯಚೂರು 03, ರಾಮನಗರ 05, ಶಿವಮೊಗ್ಗ 03, ಉತ್ತರ ಕನ್ನಡ 04, ಯಾದಗಿರಿಯಲ್ಲಿ 01 ಪ್ರಕರಣ ದೃಢಪಟ್ಟಿದ್ದು, ಹಾವೇರಿ ಜಿಲ್ಲೆಯಲ್ಲಿ ಮಾತ್ರ ಮಂಗಳವಾರ ಯಾವುದೇ ಹೊಸ ಕೊರೊನಾ ಪ್ರಕರಣ ದೃಢಪಟ್ಟಿಲ್ಲ. ವರೆಗೆ ರಾಜ್ಯದಲ್ಲಿ 38,355 ಸೋಂಕಿ ತರು ಬಲಿಯಾಗಿದ್ದಾರೆ.