Monday, 26th October 2020

ಶಿರಾ ಉಪಕದನದ ರಣಕಣದಲ್ಲಿರುವ 25 ಕಲಿಗಳು

ಶಿರಾ: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಕ್ಟೋಬರ್ 9 ರಿಂದ 16ರವರೆಗೆ ಒಟ್ಟು 25 ನಾಮಪತ್ರಗಳು ಸಲ್ಲಿಕೆ ಯಾಗಿದ್ದು, ಅಕ್ಟೋಬರ್ 17ರಂದು ನಡೆದ ನಾಮಪತ್ರ ಪರಿಶೀಲನೆಯ ನಂತರ ಕ್ರಮಬದ್ಧವಾಗಿ ನಾಮ ನಿರ್ದೇಶಿತರಾದ ಉಮೇದುವಾರರ ಪಟ್ಟಿ ಇಂತಿದೆ.

ಜನತಾದಳ(ಜಾತ್ಯಾತೀತ) ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ, ಭಾರತ ಕಮ್ಯುನಿಸ್ಟ್ ಪಕ್ಷದಿಂದ ಗಿರೀಶ್, ಭಾರತೀಯ ರಾಷ್ಟ್ರೀಯ  ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಟಿ.ಬಿ. ಜಯಚಂದ್ರ, ಭಾರತೀಯ ಜನತಾ ಪಕ್ಷದಿಂದ ಸಿ.ಎಂ.ರಾಜೇಶ್ ಗೌಡ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಓಬಳೇಶಪ್ಪ ಬಿ.ಟಿ., ರೈತ ಭಾರತ ಪಕ್ಷದಿಂದ ತಿಮ್ಮಕ್ಕ, ರಿಪಬ್ಲಿಕನ್ ಸೇನೆಯಿಂದ ಪ್ರೇಮಕ್ಕ, ಪಕ್ಷೇತರ ರಾದ ಅಂಬ್ರೋಸ್ ಡಿ. ಮೆಲ್ಲೋ, ಎಂ.ಎಲ್.ಎ.ಆರ್.ಕAಬಣ್ಣ, ಗುರುಸಿದ್ದಪ್ಪ ಎಂ., ಜಯಣ್ಣ ವೈ.ಉರುಫ್ ಜಯಣ್ಣ, ತಿಮ್ಮರಾಜ್ ‌ಗೌಡ, ಎಲ್.ಕೆ.ದೇವರಾಜು, ಜಿ.ಎಸ್.ನಾಗರಾಜ, ನಿಸಾರ್ ಅಹಮದ್, ರಂಗಪ್ಪ ಹಾಗೂ ಸಾದಿಕ್ ಪಾಷ ಅವರುಗಳ ನಾಮಪತ್ರ ಗಳು ಕ್ರಮಬದ್ಧವಾಗಿವೆ ಎಂದು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಚುನಾವಣಾಧಿಕಾರಿ ಡಾ. ನಂದಿನಿ ದೇವಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *