Thursday, 19th May 2022

28,591 ಹೊಸ ಕೋವಿಡ್‌ ಪ್ರಕರಣಗಳು ದೃಢ

#corona

ನವದೆಹಲಿ: ದೇಶದಾದ್ಯಂತ 24 ಗಂಟೆಗಳಲ್ಲಿ 28,591 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 338 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 3,32,36,921 ಕ್ಕೆ ಏರಿಕೆಯಾಗಿದ್ದು, 4,42,655 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 3,24,09,345 ಮಂದಿ ಗುಣಮುಖ ರಾಗಿದ್ದು, ಸದ್ಯ ದೇಶದಲ್ಲಿ 3,84,921 ಸಕ್ರಿಯ ಪ್ರಕರಣಗಳಿವೆ.

ಕೇರಳದಲ್ಲಿ 2,32,352, ಮಹಾರಾಷ್ಟ್ರದಲ್ಲಿ 51,285, ಕರ್ನಾಟಕದಲ್ಲಿ 16,699, ತಮಿಳುನಾಡಿನಲ್ಲಿ 16,399, ಆಂಧ್ರಪ್ರದೇಶದಲ್ಲಿ 15,157 ಸಕ್ರಿಯ ಪ್ರಕರಣಗಳಿವೆ. ಈವರೆಗೆ 73,82,07,378 ಡೋಸ್‌ ಕೋವಿಡ್‌ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.