ಕೊಡಗು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೊಡಗಿನಲ್ಲಿ ಶೇಕಡ 29 ಮತದಾನ ನಡೆದಿದೆ.
ಗ್ರಾ.ಪಂ. ಮೊದಲ ಹಂತದ ಚುನಾವಣೆಯ ಮತದಾನವು ಬಿರುಸುಗೊಂಡಿದೆ. ಬೆಳಗ್ಗೆ 11 ಗಂಟೆ ವೇಳೆಗೆ ಶೇ.29 ರಷ್ಟು ಮತದಾನ ವಾಗಿದೆ. ಸುಂಟಿಕೊಪ್ಪ, ಕೆದಕಲ್ ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮತಗಟ್ಟೆ ಸಂಖ್ಯೆ : 54ರಲ್ಲಿ ಬಹಿಷ್ಕಾರ
ಗ್ರಾಮಕ್ಕೆ ನೆಟ್ವರ್ಕ್ ಸೇರಿದಂತೆ ಮೂಲಭೂತ ಸೌಕರ್ಯ ಇಲ್ಲದ ಕಾರಣ ತೋಳುರುಶೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ಚುನಾವಣೆ ಬಹಿಷ್ಕಾರ ಹಾಕಲಾಗಿದೆ. ಗ್ರಾಮದಲ್ಲಿ 680ಕ್ಕೂ ಅಧಿಕ ಹೆಚ್ಚು ಮತದಾರ ರಿದ್ದಾರೆ.
ಗ್ರಾಮದ ಹಲವು ಬೇಡಿಕೆಗೆ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.