ವಿರಾಜ ಪೇಟೆ: ಮನೆಯ ಬಾಗಿಲು, ಕಿಟಕಿಯನ್ನು ಹೊರಗಿನಿಂದ ಮುಚ್ಚಿ, ಮನೆ ಮೇಲಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಸ್ಥಳದಲ್ಲಿಯೇ ಆರು ವಷ೯ದ ಹೆಣ್ಣು ಮಗು ಸೇರಿ ಮೂವರು ಸಜೀವ ದಹನಗೊಂಡಿದ್ದಾರೆ.
ತಾಲೂಕಿನ ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿರುವ ಕೊಳೇರ ವಸಂತ(ಚಿಟ್ಟಿಯ್ಯಪ್ಪ) ನವರ ಲೈನ್ ಮನೆಯಲ್ಲಿ ಘಟನೆ ಸಂಭವಿಸಿದೆ. ಬೆಳಗಿನ ಜಾವ ಎರಡು ಗಂಟೆಗೆ ಅವರಲ್ಲಿಗೆ ಬಂದ ಸಂಬಂಧಿಕರು ಸೇರಿ ಎಂಟು ಜನ ಮಲಗಿದ್ದ ಸಮಯ ದಲ್ಲಿ ಮಂಜುವಿನ ತಂದೆ ಬೋಜ ಪಾನ ಮತ್ತನಾಗಿ ಈ ಕೃತ್ಯವೆಸಗಿದ್ದಾರೆ.
ಮೂರು ಮಂದಿಯನ್ನು ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎರಡು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ