Friday, 9th December 2022

ಇಂದು ಮೂರು ಲೋಕಸಭೆ, ಏಳು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ

ನವದೆಹಲಿ: ಆರು ರಾಜ್ಯಗಳಲ್ಲಿ ಗುರುವಾರ ಮೂರು ಲೋಕಸಭೆ ಹಾಗೂ ಏಳು ವಿಧಾನ ಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ. ಚುನಾವಣೆಯ ಫಲಿತಾಂಶ ಜೂ.26ರಂದು ಪ್ರಕಟವಾಗಲಿದೆ.

ಉತ್ತರ ಪ್ರದೇಶ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರಾಜೀನಾಮೆ ಯಿಂದ ಅಝಂಗಢ ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಅವಶ್ಯವಾಗಿತ್ತು. ರಾಮ್‌ಪುರ ಲೋಕಸಭಾ ಕ್ಷೇತ್ರ ಸಮಾಜ ವಾದಿ ಪಕ್ಷದ ಹಿರಿಯ ನಾಯಕ ಅಝಂ ಖಾನ್ ಅವರಿಂದ ತೆರವಾಗಿದೆ. ಖಾನ್ ಕೂಡ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಭಗವಂತ್ ಮಾನ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದ ನಂತರ ಪಂಜಾಬ್‌ನ ಸಂಗ್ರೂರ್‌ ಲೋಕಸಭಾ ಸ್ಥಾನ ತೆರವುಗೊಂಡಿದೆ. ಈ ಕ್ಷೇತ್ರಕ್ಕೆ ಉಪ ಚುನಾ ವಣೆ ನಡೆಯಲಿದೆ.

ಚುನಾವಣೆ ನಡೆಯುವ ಏಳು ವಿಧಾನಸಭಾ ಸ್ಥಾನಗಳಲ್ಲಿ ಒಂದು ದಿಲ್ಲಿಯ ರಾಜಿಂದರ್ ನಗರ ಒಂದಾಗಿದೆ. ರಾಜ್ಯಸಭಾ ಸದಸ್ಯ ರಾಗಿ ಆಯ್ಕೆಯಾಗಿದ್ದ ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ ಅವರಿಂದ ಈ ಕ್ಷೇತ್ರ ತೆರ ವಾಗಿದೆ.

ಜಾರ್ಖಂಡ್‌ನ ಮಂದರ್, ಆಂಧ್ರಪ್ರದೇಶದ ಆತ್ಮಕೂರ್ ಹಾಗೂ ತ್ರಿಪುರಾದ ಅಗರ್ತಲಾ, ಟೌನ್ ಬೋರ್ಡೋವಾಲಿ, ಸುರ್ಮಾ ಹಾಗೂ ಜುಬಾರಾಜ್‌ನಗರದಲ್ಲಿ ಉಪಚುನಾವಣೆ ನಡೆಯಲಿರುವ ಉಳಿದ ವಿಧಾನಸಭಾ ಕ್ಷೇತ್ರಗಳಾಗಿವೆ.