Saturday, 16th October 2021

ಬಸ್ ನದಿಗೆ ಬಿದ್ದು 32 ಜನರ ಸಾವು

ಕಾಠ್ಮಂಡು: ನೇಪಾಳದ ಮುಗು ಜಿಲ್ಲೆಯ ಗಮ್ಗಾಧಿಗೆ ಹೋಗುವ ಪ್ರಯಾಣಿಕರಿದ್ದ ಬಸ್ ರಸ್ತೆಯಿಂದ ಜಾರಿ 300 ಮೀಟರ್ ನದಿಗೆ ಬಿದ್ದು ಕನಿಷ್ಠ 32 ಜನರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ನೇಪಾಳಗುಂಜ್ ನಿಂದ ಗಮ್ಗಾಧಿ ಕಡೆಗೆ ಹೋಗುತ್ತಿದ್ದ ಬಸ್ ಛಾಯಾನಾಥ್ ರಾರಾ ಪುರಸಭೆಯ ಪಿನಾ ಜ್ಯಾರಿ ನದಿಗೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.

ವಿಜಯದಶಮಿ ಹಬ್ಬ ಆಚರಿಸಲು ಬಸ್ಸಿನಲ್ಲಿದ್ದ ಅನೇಕ ಪ್ರಯಾಣಿಕರು ದೇಶದ ವಿವಿಧ ಭಾಗಗಳಿಂದ ಮನೆಗೆ ಮರಳುತ್ತಿದ್ದರು. ಇದೀಗ ಅಪಘಾತ ಸ್ಥಳ ದಲ್ಲಿ ರಕ್ಷಣಾ ಕಾರ್ಯ ನಡೆಸಲು ಸುರ್ಖೇತ್ ನಿಂದ ನೇಪಾಳ ಸೇನಾ ಚಾಪರ್ ಅನ್ನು ರವಾನಿಸಲಾಗಿದೆ. 

Leave a Reply

Your email address will not be published. Required fields are marked *