Saturday, 27th February 2021

32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ

ಶಿರಸಿ : ಪ್ರಾದೇಶಿಕ ಸಾರಿಗೆ ಕಚೇರಿ ( ಆರ್.ಟಿ.ಒ. ) ಯಲ್ಲಿ  ‘ರಸ್ತೆ ಸುರಕ್ಷತೆ ಜೀವದ ರಕ್ಷೆ’ ಎಂಬ ಧ್ಯೇಯ ವಾಕ್ಯದೊಂದಿಗೆ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

ಶಿರಸಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹೂವಿನ ಗಿಡಕ್ಕೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಎಷ್ಟೇ ಸುರಕ್ಷತೆ ಇದ್ದರೂ ಕಷ್ಟ ಎನ್ನುವಂತಾಗಿದೆ. ಆದ ಕಾರಣ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು. ಹೆಲ್ಮೆಟ್, ಸೀಟ್ ಬೆಲ್ಟ್ ಗಳನ್ನು ಧರಿಸುವುದು ಕಡ್ಡಾಯವಾಗಿದೆ. ಅಲ್ಲದೇ ಈಗ ಕಾನೂನನ್ನು ಸಹ ಕಠಿಣ ಮಾಡಲಾಗಿದೆ. ಜೀವನದ ರಕ್ಷಣೆಗಾಗಿ ಸಾರಿಗೆ ನಿಯಮಗಳನ್ನು ಪಾಲಿಸಬೇಕು ಎಂದರು.

ಅತಿಥಿಯಾಗಿ ಆಗಮಿಸಿದ್ದ ಡಿಎಸ್ಪಿ ರವಿ ನಾಯ್ಕ, ಜನರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಇದರಲ್ಲಿ ನಮ್ಮ ಜವಾಬ್ದಾರಿ ಅಗತ್ಯವಿದೆ. ನಿಯಮಗಳ ಅರಿವೂ ಸಹ ಅವಶ್ಯಕ. ಸುರಕ್ಷತೆಯ ಬಗ್ಗೆ ತಿಳಿಯಬೇಕಿದೆ ಎಂದರು.

ಆರ್.ಟಿ.ಒ. ಅಧಿಕಾರಿ ಸಿ.ಡಿ.ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ,‌ ಪ್ರತಿ ವರ್ಷ ಸುರಕ್ಷತಾ ಸಪ್ತಾಹ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಒಂದು ತಿಂಗಳ ವರೆಗೆ ಕಚೇರಿಯಿಂದ ರಸ್ತೆ ಸುರಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಕುರಿತು ಕೇಂದ್ರ ಸರ್ಕಾರದಿಂದ ಗೈಡ್ ಲೈನ್ಸ ಬಂದಿದೆ ಎಂದ ಅವರು, ಕಚೇರಿಯಲ್ಲಿ 446000 ವಾಹನಗಳು ನೊಂದಣಿ ಆಗಿದ್ದು, ಅದರಲ್ಲಿ
370 ದ್ವಿಚಕ್ರ ವಾಹನಗಳಿದೆ. ಪ್ರತಿ ವರ್ಷ ವಾಹನ ನೊಂದಣಿ ಮತ್ತು ಅಪಘಾತ ಸಂಖ್ಯೆ ಎರಡೂ ಹೆಚ್ಚುತ್ತಿದೆ.

ಆದ ಕಾರಣ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಕೊಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಜಾಗೃತಿ ಮೂಡಿಸುವ ಭಿತ್ತಿ ಚಿತ್ರಗಳನ್ನು ಬಿಡುಗಡೆ ಮಾಡಲಾಯಿತು.

Leave a Reply

Your email address will not be published. Required fields are marked *