Tuesday, 5th July 2022

ಚೀನಾದಲ್ಲಿ 360 ಕೋವಿಡ್​ ಪ್ರಕರಣ ದೃಢ

ಬೀಜಿಂಗ್‌: ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 360 ಕೋವಿಡ್​ ಪ್ರಕರಣಗಳು ದೃಢ ಪಟ್ಟಿದೆ.

ಶಾಂಘೈ ನಗರದಲ್ಲೇ 261 ಕೇಸ್​ಗಳು ವರದಿಯಾಗಿವೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ದೇಶದಲ್ಲಿ ಕರೋನಾ ಕೇಸ್​ಗಳನ್ನು ನಿಯಂತ್ರಿಸಲು ಲಾಕ್​ಡೌನ್​ ಸೇರಿದಂತೆ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಜನರ ಆಹಾರ ಸೇರಿದಂತೆ ದೈನಂದಿನ ಜೀವನಕ್ಕೆ ಅತ್ಯವಶ್ಯಕ ವಸ್ತುಗಳನ್ನು ಪಡೆಯಲು ಪರದಾಡುತ್ತಿದ್ದಾರೆ.

ಕರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೆ ಬೀಜಿಂಗ್​ನಲ್ಲಿ ರೆಸ್ಟೋರೆಂಟ್​ಗಳನ್ನು ಬಂದ್​ ಮಾಡಲಾಗಿದೆ. ಜೊತೆಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ಕೋವಿಡ್ ಪರೀಕ್ಷೆ ಕಡ್ಡಾಯಗೊಳಸಲಾಗಿದೆ.

ಅಧಿಕಾರಿಗಳು ಹಳಸಿದ ಆಹಾರ ವಿತರಿಸಿದ ಪರಿಣಾಮ ನಗರದಲ್ಲಿ ನಿವಾಸಿಗಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.