Friday, 19th August 2022

ದೋಣಿಯಲ್ಲಿ ಸಿಲಿಂಡರ್ ಸ್ಫೋಟ: ನಾಲ್ವರು ಕಾರ್ಮಿಕರ ಸಾವು

ಪಾಟ್ನಾ : ಮನೇರ್‌ನ ರಾಂಪುರ್ ಪಾಟಿಲಾ ಘಾಟ್ ಬಳಿಯಿದ್ದ ದೋಣಿಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ,

ಅಡುಗೆ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಸಜೀವ ದಹನವಾಗಿ, ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ರಂಜನ್ ಪಾಸ್ವಾನ್, ದಶರಥ್ ಪಾಸ್ವಾನ್, ಕನ್ಹಾಯ್ ಬಿಂದ್ ಜೊತೆಗೆ ದೋಣಿಯ ಮಾಲೀಕ ಓಂ ಪ್ರಕಾಶ್ ರೈ ಸೇರಿದ್ದಾರೆ.

ಹಲ್ದಿ ಚಾಪರ್ ಮನೇರ್ ನಿವಾಸಿಗಳಾದ ರಂಜನ್ ಪಾಸ್ವಾನ್, ದಶರಥ್ ಪಾಸ್ವಾನ್ ಮತ್ತು ಓಂ ಪ್ರಕಾಶ್ ರೈ ಮೃತಪಟ್ಟವರಲ್ಲಿ ಸೇರಿದ್ದಾರೆ.

ದೋಣಿಯಲ್ಲಿ ಸುಮಾರು 20 ಕಾರ್ಮಿಕರು ಅಕ್ರಮ ಮರಳು ಸಾಗಿಸುತ್ತಿದ್ದರು ಎಂದು ಹೇಳಲಾಗುತ್ತದೆ. ನಾಲ್ವರು ಅಡುಗೆ ಮಾಡುತ್ತಿದ್ದರು. ಆ ಸಮಯದಲ್ಲಿ, ಅನಿಲ ಸೋರಿಕೆಯಾಗಿದ್ದು, ಸ್ಪೋಟಗೊಂಡಿದೆ. ಅಡುಗೆ ಮಾಡುತ್ತಿದ್ದ ಜಾಗದಲ್ಲಿಯೇ ದೋಣಿಯ ಯಂತ್ರಕ್ಕಾಗಿ ಡೀಸೆಲ್ ಕೂಡ ಇರಿಸಲಾಗಿತ್ತು. ಅದು ಸಹ ತೀವ್ರ ಮಟ್ಟದಲ್ಲಿ ಬೆಂಕಿ ಹೊತ್ತಿ ಉರಿಯಲು ಕಾರಣ ವಾಗಿದೆ.