Thursday, 23rd March 2023

ಪಾಂಡವಪುರದಲ್ಲಿ ಕರೋನಾ ಸ್ಫೋಟ: 40 ಜನರಲ್ಲಿ ಸೋಂಕು ದೃಢ

Covid

ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತಿಮ್ಮನಕೊಪ್ಪಲು ಗ್ರಾಮದಲ್ಲಿ ಕರೋನಾ ಸೋಂಕು ಸ್ಫೋಟಗೊಂಡಿದ್ದು, 40ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ.

ವ್ಯಕ್ತಿಯೊಬ್ಬರು 10 ದಿನಗಳ ಹಿಂದೆ ಮೃತಪಟ್ಟ ಹಿನ್ನೆಲೆಯಲ್ಲಿ ತಿಮ್ಮನಕೊಪ್ಪಲು ಗ್ರಾಮದ ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. 600 ಜನರಿರುವ ಗ್ರಾಮದಲ್ಲಿ ಇದೀಗ ಬರೋಬ್ಬರಿ 40 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ.

ಗ್ರಾಮಕ್ಕೆ ದೌಡಾಯಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡಿದ್ದಾರೆ. ಸೋಂಕಿತರನ್ನು ಹೋಂ ಐಸೋಲೇಟ್ ಮಾಡಲಾಗಿದೆ.

error: Content is protected !!