Tuesday, 27th September 2022

ಭೂಕುಸಿತ: ಉತ್ತರಕಾಶಿಯಲ್ಲಿ ಸಿಲುಕಿದ 400 ಯಾತ್ರಾರ್ಥಿಗಳು

ಉತ್ತರಕಾಶಿ : ರಾಜ್ಯದಲ್ಲಿ ಭಾರೀ ಮಳೆಯ ಪರಿಣಾಮ ಭೂಕುಸಿತ ಸಂಭವಿಸಿ, ರಾಜಸ್ಥಾನದ 400 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಮತ್ತು ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

‘ರಾಜಸ್ಥಾನದ ಭಿಲ್ವಾರಾ, ಅಜ್ಮೀರ್ ಮತ್ತು ಇತರ ಸ್ಥಳಗಳಿಂದ ಸುಮಾರು 400 ಪ್ರಯಾಣಿಕರು ಗಂಗೋತ್ರಿ ಧಾಮದಿಂದ ಹಿಂತಿರುಗುತ್ತಿದ್ದಾಗ ಉತ್ತರಕಾಶಿಯ ಗಬ್ನಾನಿ ಬಳಿ ಭೂಕುಸಿತದಿಂದಾಗಿ ಸಿಲುಕಿಕೊಂಡರು’ ಎಂದು ರಾಜ್ಯ ವಿಪತ್ತು (ಎಸ್‌ಡಿಆರ್‌ ಎಫ್) ಕಮಾಂಡೆಂಟ್ ರಾಜ್‌ಕುಮಾರ್ ಗುಪ್ತಾ ಅಧಿಕಾರಿ ತಿಳಿಸಿದ್ದಾರೆ.