Monday, 5th December 2022

4,272 ಹೊಸ ಕೋವಿಡ್ ಪ್ರಕರಣ ದೃಢ

ವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 4,272 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 11 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 4,45,83,360ಕ್ಕೆ ಏರಿಕೆಯಾಗಿದೆ. ಆ ಪೈಕಿ 5,28,611 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ.

ಇದುವರೆಗೆ 4,40,13,999 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 40,750 ಸಕ್ರಿಯ ಪ್ರಕರಣಗಳಿವೆ. ಕೇರಳದಲ್ಲಿ 12,195, ತಮಿಳುನಾಡಿನಲ್ಲಿ 5,498, ಮಹಾರಾಷ್ಟ್ರದಲ್ಲಿ 3,429, ಪಶ್ಚಿಮ ಬಂಗಾಳದಲ್ಲಿ 3,170, ಕರ್ನಾಟಕದಲ್ಲಿ 2,744 ಸಕ್ರಿಯ ಪ್ರಕರಣಗಳಿವೆ. ದೈನಂದಿನ ಪಾಸಿಟಿವಿಟಿ ದರ ಶೇ 1.35 ರಷ್ಟಿದೆ.

ಇದುವರೆಗೆ 218.17 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ.