Thursday, 19th May 2022

45,352 ಹೊಸ ಕೋವಿಡ್ ಸೋಂಕಿನ ಪ್ರಕರಣ ಪತ್ತೆ

#corona

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 45,352 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ ಕಳೆದೊಂದು ದಿನದಲ್ಲಿ 366 ಮಂದಿ ಮೃತಪಟ್ಟಿರುವುದಾಗಿ ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

34, 791 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 3,99,778 ಸೋಂಕಿನ ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿನ ಸಂಖ್ಯೆ 3,29,03,289 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ದೇಶದಲ್ಲಿ 4,39,895 ಮಂದಿ ಮೃತಪಟ್ಟಿದ್ದಾರೆ.

ಕೇರಳವೊಂದರಲ್ಲಿ ಕಳೆದೊಂದು ದಿನದಲ್ಲಿ 32,097 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಸೋಂಕಿಗೆ 188 ಮಂದಿ ಬಲಿಯಾಗಿದ್ದಾರೆ.

ಲಸಿಕಾ ಅಭಿಯಾನದಡಿಯಲ್ಲಿ 67.09 ಕೋಟೊ ಲಸಿಕಾ ಡೋಸ್ ಗಳನ್ನು ದೇಶದಾದ್ಯಂತ ನೀಡಲಾಗಿದೆ ಎಂದು ಕೂಡ ಸಚಿವಾಲಯ ತಿಳಿಸಿದೆ.