Thursday, 19th May 2022

ಮೂರನೇ ಅಲೆ ಭೀತಿ: 47,092 ಹೊಸ ಸೋಂಕು ಪತ್ತೆ

#corona

ನವದೆಹಲಿ: ಮೂರನೇ ಅಲೆ ಭೀತಿಯ ನಡುವೆಯೆ ದೇಶದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.

ದೇಶದಲ್ಲಿ ಬುಧವಾರ ಒಂದೇ ದಿನ 47,092 ಹೊಸ ಸೋಂಕುಗಳು ವರದಿಯಾಗುತ್ತಿದ್ದಂತೆ, ದೈನಂದಿನ ಕೋವಿಡ್ ಸಂಖ್ಯೆ ಗುರುವಾರ ಶೇ.12ರಷ್ಟು ಜಿಗಿತ ಕಂಡಿದೆ. ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಸುಮಾರು 509 ಸಾವುಗಳು ದಾಖಲಾಗಿವೆ.

ಒಟ್ಟು ಪ್ರಕರಣಗಳು : 3,28,57,937
ಸಕ್ರಿಯ ಪ್ರಕರಣಗಳು : 3,89,583
ಒಟ್ಟು ಚೇತರಿಕೆ ಸಂಖ್ಯೆ : 3,20,28,825

ಮೃತಪಟ್ಟವರ ಸಂಖ್ಯೆ : 4,39,529

ವೈರಲ್ ಸೋಂಕಿನಿಂದ ಕೇರಳದಲ್ಲಿ ಬಾಧಿತರಾದವರ ಒಟ್ಟು ಸಂಖ್ಯೆ 40,90,036 ಗೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 32,803 ಪ್ರಕರಣಗಳು ದಾಖಲಾಗಿವೆ.