Sunday, 27th November 2022

ಕೋಲ್ಕತಾದಲ್ಲಿ ಮತ್ತೋರ್ವ ಮಾಡೆಲ್ ಸಾವು

ಹದಿನೈದು ದಿನಗಳಲ್ಲಿ ನಾಲ್ಕನೇ ಘಟನೆ

ಕೊಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಮತ್ತೋರ್ವ ಮಾಡೆಲ್ ಮೃತಪಟ್ಟಿದ್ದು, ಇದು ಹದಿನೈದು ದಿನಗಳಲ್ಲಿ ನಗರದಲ್ಲಿ ನಾಲ್ಕನೇ ಘಟನೆಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮೇಕಪ್ ಆರ್ಟಿಸ್ಟ್ ಕೂಡಾ ಆಗಿದ್ದ ಮಾಡೆಲ್ ಕಸ್ಬಾ ಪ್ರದೇಶದ ಬೆಡಿಯಾ ಡಂಗಾದಲ್ಲಿ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.

ತನ್ನ ದುಪ್ಪಟ್ಟದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದು ಆತ್ಮಹತ್ಯೆ ಎಂಬುದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಶಂಕಿತ ರೀತಿಯಲ್ಲಿ ಮೃತಪಟ್ಟ ಇತರ ಮೂವರು ಮಾಡೆಲ್ ಗಳಾದ ಮಂಜುಶಾ ನೆಯೋಗಿ, ಬಿಡಿಶಾ ಡಿ ಮಂಜುದಾರ್ ಮತ್ತು ಕಿರುತೆರೆ ಕಲಾವಿದೆ ಪಲ್ಲಬಿ ದೇವ್ ಅವರ ಸಾವಿನ ಹಿಂದೆ ಬೇರೆ ಕಾರಣವಿದೆಯೇ ಎಂಬುದರ ಬಗ್ಗೆ ಪೊಲೀಸರು ತಿಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.