Friday, 19th August 2022

ಚಿಕಾಗೋ ಉಪನಗರದಲ್ಲಿ ಗುಂಡಿನ ದಾಳಿ: ಆರು ಮಂದಿ ಸಾವು

ಚಿಕಾಗೋ: ಚಿಕಾಗೋ ಉಪನಗರದಲ್ಲಿ ಪರೇಡ್‌ನ ವೇಳೆ ನಡೆಸಿರುವ ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಕನಿಷ್ಠ 24 ಮಂದಿ ಗಾಯಗೊಂಡಿ ದ್ದಾರೆ ಎಂದು ವರದಿಯಾಗಿದೆ.

ಸ್ವಾತಂತ್ರ್ಯೋತ್ಸವದ ಆಚರಣೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಬಂದೂಕುಧಾರಿ ಚಿಲ್ಲರೆ ಅಂಗಡಿಯ ಛಾವಣಿಯಿಂದ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ಆರಂಭಿಸಿದ್ದಾನೆ.

ಹೈಲ್ಯಾಂಡ್ ಪಾರ್ಕ್‌ನ ಬೀದಿಗಳಲ್ಲಿ ಗುಂಡು ಹಾರಿಸಿದ್ದರಿಂದ ಮೆರವಣಿಗೆ ಯಲ್ಲಿ ಭಾಗವಹಿಸುವವರು ಇದ್ದಕ್ಕಿದ್ದಂತೆ ಭಯಭೀತರಾಗಿ ಓಡಿಹೋಗುವು ದಕ್ಕೆ ಆರಂಭಿಸಿದರು. ಪಾದಚಾರಿ ಮಾರ್ಗದಲ್ಲಿ ಕುಳಿತು ಮೆರವಣಿಗೆಯನ್ನು ವೀಕ್ಷಿಸುತ್ತಿದ್ದರು. ಆದರೆ ಗುಂಡಿನ ಸದ್ದು ಕೇಳಿ ಬರುತ್ತಿದ್ದಂತೆ ಇಡೀ ಚಿತ್ರಣವೇ ಬದಲಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿದೆ.

ಗುಂಡಿನ ದಾಳಿ ನಡೆದ ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಗಾಯಗೊಂಡ 24 ಜನರನ್ನು ಹೈಲ್ಯಾಂಡ್ ಪಾರ್ಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೈಲ್ಯಾಂಡ್ ಪಾರ್ಕ್ ನಗರದಲ್ಲಿ ಗುಂಡಿನ ದಾಳಿ ನಡೆದಿರುವ ಹಿನ್ನೆಲೆ ಜು.4ರ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಗೊಳಿಸ ಲಾಗಿದೆ ಎಂದು ಘೋಷಿಸಲಾಯಿತು.