Friday, 7th October 2022

ಜಿಲ್ಲೆಯಲ್ಲಿ 63 ಶಿಕ್ಷಕರಿಗೆ ಕರೋನಾ, ಓರ್ವ ಸಾವು

ತುಮಕೂರು: ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 63 ಶಿಕ್ಷಕರಿಗೆ ಕರೋನಾ ಪಾಸಿಟಿವ್ ಕಂಡುಬಂದಿದೆ. ಅಲ್ಲದೆ ಓರ್ವ ಶಿಕ್ಷಕ ಕರೋನಾದಿಂದ ಮೃತಪಟ್ಟಿದ್ದಾರೆ.
ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 46 ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 17 ಮಂದಿ ಶಿಕ್ಷಕರಿಗೆ  ಕರೋನಾ ದೃಢಪಟ್ಟಿದೆ.
ವಿದ್ಯಾಗಮ ಯೋಜನೆ ಮೂಲಕ ಮಕ್ಕಳ ಮನೆ ಬಾಗಿಲಿಗೆ‌ ಹೋಗಿ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕರಿಗೆ ಕರೋನಾ ಕಂಡುಬಂದಿರು ವುದು ಆತಂಕ ಮೂಡಿಸಿದೆ.