Tuesday, 27th July 2021

ಕರೋನಾ: 67,208 ಹೊಸ ಪ್ರಕರಣ ಪತ್ತೆ

ನವದೆಹಲಿ: ಭಾರತದಲ್ಲಿ ಕರೋನಾ ತೀವ್ರತೆ ಕಡಿಮೆಯಾಗುತ್ತಿದೆ. ಆದರೆ, ಬುಧವಾರಕ್ಕೆ ಹೋಲಿಸಿದರೆ ಗುರುವಾರ ದೇಶದಲ್ಲಿ ಕರೋನಾ ಪ್ರಕರಣ ಸ್ವಲ್ಪ ಹೆಚ್ಚಳವಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 67,208 ಹೊಸ ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 2,330 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಈವರೆಗೂ ಒಟ್ಟು 3,81,903 ಜನರು ಮೃತಪಟ್ಟಿದ್ದಾರೆ.

ಕಳೆದ 24 ಗಂಟೆಗಳಲ್ಲಿ 1,03,570 ಕೋವಿಡ್ ಸೋಂಕಿತರು ಚೇತರಿಸಿಕೊಂಡಿದ್ದಾರೆ ಮತ್ತು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು 2,84,91,670 ಸೋಂಕಿತರು ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಪ್ರಸ್ತುತ 8,26,740 ಕರೋನಾ ಪಾಸಿಟಿವ್ ಪ್ರಕರಣಗಳಿವೆ.

Leave a Reply

Your email address will not be published. Required fields are marked *