Tuesday, 7th December 2021

ಕೇರಳದಲ್ಲಿ 7,643 ಹೊಸ ಕೋವಿಡ್‌ ಪ್ರಕರಣ: 77 ಮಂದಿ ಬಲಿ

ತಿರುವನಂತಪುರಂ: ಕೇರಳದಲ್ಲಿ ಮಂಗಳವಾರ 7,643 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದೆ. ಮಂಗಳವಾರ 77 ಮಂದಿ ಕೋವಿಡ್‌ ಸೋಂಕಿಗೆ ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 27,002ಕ್ಕೆ ಏರಿಕೆ ಆಗಿದೆ.

ತ್ರಿಶೂರಿನಲ್ಲಿ 1,017, ತಿರುವನಂತಪುರದಲ್ಲಿ 963, ಎರ್ನಾಂಕುಲಂನಲ್ಲಿ 817, ಕೋಜಿಕ್ಕೋಡಿನಲ್ಲಿ 787, ಕೊಟ್ಟಾಯಂನಲ್ಲಿ 765, ಪಾಲಕ್ಕಾಡ್‌ನಲ್ಲಿ 542, ಕೊಲ್ಲಂನಲ್ಲಿ 521, ಕಣ್ಣೂರಿನಲ್ಲಿ 426, ಪಥನಂತಿಟ್ಟದಲ್ಲಿ 424, ಇಡುಕ್ಕಿ 400, ಮಲಪ್ಪುರಂ 353, ಆಲಪ್ಪುಲ 302, ವಯನಾಡು 185 ಹಾಗೂ ಕಾಸರಗೋಡಿ ನಲ್ಲಿ 141 ಮಂದಿಯಲ್ಲಿ ಹೊಸದಾಗಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ.

ಕಳೆದ 24 ಗಂಟೆಯಲ್ಲಿ ಒಟ್ಟು 82,408 ಮಂದಿಯ ಕೋವಿಡ್‌ ಪರೀಕ್ಷೆಯನ್ನು ನಡೆಸಲಾಗಿದ್ದು, 7,643 ಮಂದಿಗೆ ಕೋವಿಡ್‌ ಸೋಂಕು ತಗುಲಿರುವುದು ಖಚಿತ ವಾಗಿದೆ. ಪ್ರಸ್ತುತ 2,92,178 ಮಂದಿ ರಾಜ್ಯದಲ್ಲಿ ತೀವ್ರಾ ನಿಗಾದಲ್ಲಿ ಇದ್ದಾರೆ. 9,810 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 854 ಮಂದಿಯನ್ನು ಮಂಗಳವಾರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇತ್ತೀಚೆಗೆ “ಕೇರಳ ರಾಜ್ಯದಲ್ಲಿ ಸುಮಾರು ಶೇಕಡ 93.16 ಜನರಿಗೆ ಮೊದಲ ಡೋಸ್‌ ಕೊರೊನಾ ವೈರಸ್‌ ವಿರುದ್ಧದ ಲಸಿಕೆಯನ್ನು ನೀಡಲಾಗಿದೆ,” ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ.

ದೇಶದಲ್ಲಿಯೇ ಅತಿ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯ ಕೇರಳವಾಗಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್, “ಯಾರು ಈವರೆಗೆ ಕೋವಿಡ್‌ ಲಸಿಕೆಯನ್ನು ಪಡೆದಿಲ್ಲ, ಅವರು ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಳ್ಳಿ,” ಎಂದು ಮನವಿ ಮಾಡಿದ್ದಾರೆ.

ಇಡೀ ದೇಶದಲ್ಲಿಯೇ ಕೇರಳದಲ್ಲಿ ಅತಿ ಕಡಿಮೆ ಸೆರೊಪಾಸಿಟಿವಿಟಿ ಇರುವುದಾಗಿ ತಿಳಿಸಲಾಗಿತ್ತು. ಕೇರಳದಲ್ಲಿ ಆಗ 44.4% ಸೆರೊಪಾಸಿಟಿವಿಟಿ ದರವಿರುವುದಾಗಿ ತಿಳಿಸಿದ್ದು, ಇದೀಗ ಆ ದರ 82.6%ಗೆ ಏರಿಕೆಯಾಗಿದೆ.