Sunday, 14th August 2022

8,954 ಜನರಿಗೆ ಕರೋನಾ ಸೋಂಕು ಪತ್ತೆ

#corona

ನವದೆಹಲಿ: ದೇಶದಲ್ಲಿ ಒಮಿಕ್ರಾನ್ ವೈರಸ್ ಭೀತಿಯ ನಡುವೆಯೂ ಬುಧವಾರ ಹೊಸದಾಗಿ 8,954 ಜನರಿಗೆ ಕರೋನಾ ಸೋಂಕು ಪತ್ತೆಯಾಗಿದೆ. 267 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಇದು ಒಟ್ಟಾರೆ ಪ್ರಕರಣಗಳ ಸಂಖ್ಯೆಯನ್ನು 3,45,96,776 ಕ್ಕೆ ಮತ್ತು ಸಾವಿನ ಸಂಖ್ಯೆಯನ್ನು 4,69,247 ಕ್ಕೆ ತಳ್ಳಿದೆ. ದೇಶಾದ್ಯಂತ 10,207 ಚೇತರಿಕೆಗಳು ವರದಿಯಾಗಿವೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಒಮಿಕ್ರಾನ್ ವೈರಸ್ ರೂಪಾಂತರ ಎಂದು ಘೋಷಿಸಿದೆ. ಇದು ವಿಶ್ವದಾದ್ಯಂತ ಆತಂಕ ಹುಟ್ಟುಹಾಕಿದೆ. ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಈ ರೂಪಾಂತರವನ್ನು ಮೊದಲು ಪತ್ತೆ ಮಾಡಲಾಯಿತು. ‘ಒಮೈ ಕ್ರಾನ್’ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಹೇಳಲಾಗುತ್ತದೆ.