Wednesday, 5th October 2022

ಮೆಟ್ರೊ ಪಾರ್ಕಿಂಗ್’ನಲ್ಲಿ ಅಗ್ನಿ ಅವಘಡ: 90 ವಾಹನಗಳಿಗೆ ಹಾನಿ

ನವದೆಹಲಿ: ಜಾಮಿಯಾ ನಗರದ ಮೆಟ್ರೊ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 90 ವಾಹನಗಳಿಗೆ ಹಾನಿಯಾಗಿವೆ. ಘಟನೆ ಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಜಾಮಿಯ ನಗರದ ಟಿಕೋನಾ ಪಾರ್ಕ್‌ನಲ್ಲಿ ಅಗ್ನಿ ಅವಘಡಕ್ಕೆ ಸಂಬಂಧಿಸಿ ಕರೆ ಬಂದಿದೆ. 11 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ದೆಹಲಿಯ ಅಗ್ನಿ ಶಾಮಕ ಸೇವೆಗಳ ನಿರ್ದೇಶಕ ಗಾರ್ಗ್ ತಿಳಿಸಿದ್ದಾರೆ.