Tuesday, 27th September 2022

ಕೋವಿಡ್-19: 9 ಸಾವಿರದ 419 ಸೋಂಕಿತರು ಪತ್ತೆ

#corona

ನವದೆಹಲಿ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಕಳೆದ 24 ಗಂಟೆಗಳಲ್ಲಿ ಸ್ವಲ್ಪ ಹೆಚ್ಚಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 9 ಸಾವಿರದ 419 ಸೋಂಕಿತರು ವರದಿಯಾಗಿದ್ದು 159 ಮಂದಿ ಮೃತಪಟ್ಟಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 9 ಸಾವಿರದ 419 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. 159 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 8 ಸಾವಿರದ 251 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 3 ಕೋಟಿಯ 40 ಲಕ್ಷದ 97 ಸಾವಿರದ 388 ಮಂದಿ ಗುಣಮುಖರಾಗಿದ್ದಾರೆ.

ಲಸಿಕೆ ಅಭಿಯಾನ ಆರಂಭವಾದ ನಂತರ ಇದುವರೆಗೆ 130.39 ಕೋಟಿ ಲಸಿಕೆ ಡೋಸ್ ಗಳನ್ನು ವಿತರಿಸಲಾಗಿದೆ. ಸೋಂಕಿನಿಂದ ಗುಣಮುಖ ಹೊಂದಿದವರ ಪ್ರಮಾಣ ಶೇಕಡಾ 98.36ರಷ್ಟಿದ್ದು ಕಳೆದ ವರ್ಷ ಮಾರ್ಚ್ ನಂತರ ಈ ಬಾರಿ ಗುಣಮುಖ ಹೊಂದಿ ದವರ ಸಂಖ್ಯೆ ಅಧಿಕವಾಗಿದೆ.

ದೇಶದಲ್ಲಿ 65.19 ಕೋಟಿ ಕರೋನಾ ಪರೀಕ್ಷೆ ನಡೆಸಲಾಗಿದೆ.