ಹೈದರಾಬಾದ್: ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದ್ದು, ನನ್ನ ಗೌಪ್ಯತೆಗೆ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ರಾಜ್ಯಪಾಲೆ ತಮಿಳಿಸಾಯಿ ಸೌಂದರ ರಾಜನ್ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾರೆ.
ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದ್ದು, ನನ್ನ ಗೌಪ್ಯತೆಗೆ ಹಸ್ತಕ್ಷೇಪ ಮಾಡಲಾಗು ತ್ತಿದೆ. ರಾಜ್ಯದಲ್ಲಿ ವಿಶೇಷವಾಗಿ ರಾಜ್ಯಪಾಲರ ಕಚೇರಿ ಗೌರವಿಸುವಲ್ಲಿ “ಪ್ರಜಾಸತ್ತಾತ್ಮಕ ವಲ್ಲದ ಪರಿಸ್ಥಿತಿ” ಇದೆ ಎಂದು ರಾಜ್ಯಪಾಲೆ ತಮಿಳಿಸಾಯಿ ಸೌಂದರ ರಾಜನ್ ಅವರು ಹೇಳಿದ್ದಾರೆ.
ತಮ್ಮ ಮಾಜಿ ಎಡಿಸಿ (ಸಹಾಯಕ-ಡಿ-ಕ್ಯಾಂಪ್) ಮೇಜರ್ ತುಷಾರ್ ಭಾಸಿನ್ ಅವರ ಹೆಸರನ್ನು ಟಿಆರ್ಎಸ್ ಶಾಸಕರ ಖರೀದಿ ಪ್ರಕರಣದಲ್ಲಿ ತಳುಕು ಹಾಕಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕರ ಖರೀದಿ ಪ್ರಕರಣದಲ್ಲಿ ರಾಜಭವನದ ಪಾತ್ರವಿದೆ ಎಂದು ಬಿಂಬಿಸಲು ತುಷಾರ್ ಅವರ ಹೆಸರನ್ನು ಪೋಸ್ಟ್ ಮಾಡ ಲಾಗಿದೆ. ಶಾಸಕರ ಖರೀದಿ ಎಂಬ ಅಸಹ್ಯಕರ ಪ್ರಕರಣದಲ್ಲಿ ರಾಜಭವನವನ್ನು ಏಕೆ ಎಳೆದು ತರಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಕೆಲ ಮಸೂದೆಗಳನ್ನು ಉದ್ದೇಶಪೂರ್ವಕವಾಗಿ ರಾಜ್ಯಪಾಲರು ತಡೆಹಿಡಿದಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಇದಕ್ಕೆ ಅನುಮೋದನೆ ನೀಡುವಲ್ಲಿ ಯಾವುದೇ ವಿಳಂಬ ನೀತಿ ಅನುಸರಿಸುತ್ತಿಲ್ಲ. ಆದರೆ ಕರಡು ನಿಯಮಗಳನ್ನು ವಿವರವಾಗಿ ಪರಿಶೀಲಿಸಲು ಬಯಸಿದ್ದೇನೆಂದು ಸ್ಪಷ್ಟಪಡಿಸಿದರು.
ಇದೇ ವೇಳೆ ತಮ್ಮ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಬಾಂಬ್ ಸಿಡಿಸಿದ ರಾಜ್ಯಪಾಲೆ, ನನ್ನ ದೂರವಾಣಿಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಬಲವಾದ ಸಂಶಯ ನನಗಿದೆ. ಬಳಿಕ ತಮ್ಮ ಕಚೇರಿ ಪಾರದರ್ಶಕವಾಗಿ ಕಾರ್ಯನಿರ್ವಹಿಸು ತ್ತಿದೆ ಎಂದು ಸಮರ್ಥಿಸಿಕೊಂಡರು.