ಕೊಲ್ಹಾರ: ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾದ ರಾಜಶೇಖರ ಡಂಬಳ ಪಟ್ಟಣ ಪಂಚಾಯತ್ ಕಾರ್ಯಾ ಲಯಕ್ಕೆ ಭೇಟಿ ನೀಡಿ ವಿವಿಧ ಕಡತಗಳನ್ನು ಪರಿಶೀಲನೆ ನಡೆಸಿದರು ಹಾಗೂ ಅಧಿಕಾರಿಗಳ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಗುರುವಾರ ಪ ಪಂ ಕಾರ್ಯಾಲಯಕ್ಕೆ ಆಗಮಿಸಿದ ಅವರು ಒಳಚರಂಡಿ ಕಾಮಗಾರಿಯ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು ಹಾಗೂ ವಿಜಯಪುರ ನೀರು ಸರಬುರಾಜು ಘಟಕಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಂಡರು.
ಪ.ಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ, ಕಿರಿಯ ಅಬಿಯಂತರ ಸದ್ದಾಂ ಶೇಖ್, ನಿಖಿಲ್ ಪಾಟೀಲ್, ಹಬೀಬ ಯಲಗೋಡ, ತಾಜುದ್ಧೀನ್, ಗೌಡಪ್ಪ ಕಾರಜೋಳ ಹಾಗೂ ಅನೇಕರು ಇದ್ದರು.